ಬುಧವಾರ, ನವೆಂಬರ್ 20, 2019
22 °C

ತೆರಿಗೆ ಪಾವತಿಗೆ ನೋಟಿಸ್

Published:
Updated:

ತೆರಿಗೆ ಪಾವತಿಗೆ ನೋಟಿಸ್

ಕೊಚ್ಚಿ (ಪಿಟಿಐ):
ಎರಡು ವರ್ಷಗಳ ಬಾಕಿ ತೆರಿಗೆ ಹಣ ಪಾವತಿಸುವಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಮುಖ್ಯಸ್ಥ ಕೆ.ಜಿ. ಬಾಲಕೃಷ್ಣ ಅವರ ಮಗಳು ಹಾಗೂ ಅಳಿಯನಿಗೆ ತೆರಿಗೆ ಇಲಾಖೆ ನೋಟಿಸ್‌ಕಳುಹಿಸಿದೆ.ಮಗಳು ಕೆ.ಬಿ.ಸೋನಿ, ಅಳಿಯ ವಿ.ಸಿ.ಶ್ರೀನಿಜನ್,  2001-08 ಹಾಗೂ 2009-10ರ ತೆರಿಗೆ ಪಾವತಿ ಹಣವನ್ನು ಬಾಕಿ ಉಳಿಸಿದ್ದು, ಅವರಿಗೆ ನೋಟಿಸ್ ತಲುಪಿದ ಬಳಿಕ ಇಲಾಖೆಯಿಂದ ವಿಚಾರಣೆಗೆ ಕಳುಹಿಸಲಾಗುವುದು ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಪಂಚಾಯತ್ ಕಾರ್ಯದರ್ಶಿ ಹತ್ಯೆ

ರಾಯಗಡ (ಪಿಟಿಐ):
ನಕ್ಸಲ್ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂಬ ಸಂಶಯದಿಂದ ಪಂಚಾಯತ್ ಕಾರ್ಯದರ್ಶಿಯೊಬ್ಬನನ್ನು ನಕ್ಸಲರು ಹತ್ಯೆ ಮಾಡಿರುವ ಘಟನೆ ರಾಯಗಡ ಜಿಲ್ಲೆಯ ಕರ್ಣಿಪಾಲ್ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಪ್ರತಿಕ್ರಿಯಿಸಿ (+)