ತೆರಿಗೆ ಪಾವತಿ ಕೇಂದ್ರ ಉದ್ಘಾಟನೆ

7

ತೆರಿಗೆ ಪಾವತಿ ಕೇಂದ್ರ ಉದ್ಘಾಟನೆ

Published:
Updated:

ಕೃಷ್ಣರಾಜಪುರ: ಬಿಬಿಎಂಪಿಯಿಂದ ವಿಜನಾಪುರ ಗ್ರಾಮದ ಉದ್ಯಾನದ ಆವರಣದಲ್ಲಿ ಆರಂಭಿಸಿದ ನೂತನ ತೆರಿಗೆ ಪಾವತಿ ಕೇಂದ್ರವನ್ನು ಪಾಲಿಕೆ ಸದಸ್ಯ ಪಿ.ಸುಕುಮಾರ್ ಅವರು ಉದ್ಘಾಟಿಸಿದರು.ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಜನರು ಸಕಾಲದಲ್ಲಿ ತೆರಿಗೆ ಪಾವತಿಸಲು ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.ಈ ಕೇಂದ್ರದಲ್ಲಿ ಜನರು ದೂರು ನೀಡಬಹುದು. ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೇಂದ್ರದ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry