ಶುಕ್ರವಾರ, ಮಾರ್ಚ್ 5, 2021
21 °C
ನಗರ ಸಂಚಾರ

ತೆರಿಗೆ ಪಾವತಿ: ವಿಶೇಷ ರಿಯಾಯಿತಿ

ಜಿ.ಸಿ. ಅನಿಲ್‌ಕುಮಾರ Updated:

ಅಕ್ಷರ ಗಾತ್ರ : | |

ತೆರಿಗೆ ಪಾವತಿ: ವಿಶೇಷ ರಿಯಾಯಿತಿ

ಮಡಿಕೇರಿ: ನಗರಸಭೆ ವ್ಯಾಪ್ತಿಯ ಆದಾಯದ ಮೂಲವಾದ ನೀರಿನ ತೆರಿಗೆ, ಆಸ್ತಿ ತೆರಿಗೆಯನ್ನು ಕಾಲಮಿತಿ ಯೊಳಗೆ ಪಾವತಿಸಿದ್ದಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ.ಕಳೆದ ಸಾಲಿನ ತೆರಿಗೆಯನ್ನು ಮಾರ್ಚ್‌ 31 ರೊಳಗೆ ಪಾವತಿಸಿದವರಿಗೆ ಈ ರಿಯಾಯಿತಿ ನೀಡಲಾಗುವುದು. ಏಪ್ರಿಲ್‌, ಮೇ, ಜೂನ್‌ ತಿಂಗಳಲ್ಲಿ ಪಾವತಿಸುವವರಿಗೆ ಯಾವುದೇ ರಿಯಾಯಿತಿ ಇಲ್ಲ. ಬಳಿಕ ಪ್ರತಿ ತಿಂಗಳು ₨ 2 ಬಡ್ಡಿಯನ್ನು ತೆರಿಗೆಯ ಮೇಲೆ ವಿಧಿಸಲಾಗುವುದು.2012–13ನೇ ಸಾಲಿನಲ್ಲಿ ವಾರ್ಷಿಕವಾಗಿ ₨ 97 ಲಕ್ಷದಷ್ಟು ನೀರಿನ ತೆರಿಗೆ ಪಾವತಿಯಾಗಬೇಕು. ಆದರೆ ₨ 56.42 ಲಕ್ಷ ಮಾತ್ರ ಪಾವತಿ ಯಾಗಿದ್ದು, ಇನ್ನು ₨ 40.90 ಲಕ್ಷ ಪಾವತಿ ಬಾಕಿ ಇದೆ ಎಂದು ಕಂದಾಯ ಅಧಿಕಾರಿ ವೆಂಕಟೇಶ್‌ ತಿಳಿಸಿದರು.ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಕೂಡ ಸಾರ್ವಜನಿಕರು ಸಕಾಲದಲ್ಲಿ ಪಾವತಿಸುತ್ತಿಲ್ಲ. ವಾರ್ಷಿಕವಾಗಿ ₨ 1.18 ಕೋಟಿಯಷ್ಟು ತೆರಿಗೆ ಸಂಗ್ರಹ ವಾಗಬೇಕಿದೆ. ಆದರೆ, ನೀರಿಕ್ಷೆ ಮಾಡಿದಷ್ಟು ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದರು.‘ನೀರಿನ ಬಿಲ್‌ನ್ನು ಪ್ರತಿ ತಿಂಗಳು ಪಾವತಿಸಬೇಕು. ಈ ಬಗ್ಗೆ ಸಾರ್ವಜನಿಕರು ಅರಿತು, ಸೂಕ್ತ ಸಮಯಕ್ಕೆ ಪಾವತಿಸಬೇಕು. ಇಲ್ಲವಾದಲ್ಲಿ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಲಾಗುವುದು. ಬಳಿಕ ಸಂಪರ್ಕ ಪಡೆಯಲು ನಗರಸಭೆಯ ಹಲವು ಷರತ್ತುಗಳನ್ನು ಪೂರೈಸಬೇಕಿದೆ’ ಎಂದು ಅವರು ತಿಳಿಸಿದರು.ನಗರಸಭೆ ಸುಪರ್ದಿಯ ವಾಣಿಜ್ಯ ಮಳಿಗೆಗಳೂ ತೆರಿಯ ಪಾವತಿಯಲ್ಲಿ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳ ಮಾಲೀಕರು ಶೀಘ್ರವೇ ಬಿಲ್‌ ಪಾವತಿಸುವಂತೆ ಅವರು ಕೋರಿದರು.ಅಭಿವೃದ್ಧಿಗೆ ಸಹಕರಿಸಿ

ನಗರಸಭೆಯ ಅಭಿವೃದ್ಧಿ ಕಾರ್ಯಗಳು ತೆರಿಗೆ ಹಣವನ್ನು ಆಧರಿಸಿದ್ದು, ಸಾರ್ವಜನಿಕರು ಪಾವತಿಸಬೇಕಾದ ತೆರಿಗೆಯನ್ನು ಸೂಕ್ತ ಸಮಯಕ್ಕೆ ನೀಡಬೇಕು. ಇದರಿಂದ ನಗರದ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ.

–ಬಿ.ಬಿ. ಪುಷ್ಪಾವತಿ, ನಗರಸಭೆ ಆಯುಕ್ತರುತಿಂಗಳ ನೀರಿನ ತೆರಿಗೆ

ಮನೆಗಳಿಗೆ– ₨ 90

ಇತರೆ– ₨ 240

ವಾಣಿಜ್ಯೋದ್ಯಮ– ₨ 480

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.