ತೆರಿಗೆ ಮರು ಪಾವತಿ ಇಳಿಕೆ

7

ತೆರಿಗೆ ಮರು ಪಾವತಿ ಇಳಿಕೆ

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಆದಾಯ ತೆರಿಗೆ ಮರು ಪಾವತಿ ರೂ46,000 ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 23.33ರಷ್ಟು ಕುಸಿತ ಕಂಡಿದೆ.2010-11ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಒಟ್ಟು ರೂ60,000 ಕೋಟಿ ಆದಾಯ ತೆರಿಗೆ ಮರು ಪಾವತಿ ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಆಗಸ್ಟ್ ತಿಂಗಳವರೆಗೆ ಐ.ಟಿ ರಿಟರ್ನ್ಸ್ ಸಲ್ಲಿಸಿದ್ದ ಸುಮಾರು 33.15 ಲಕ್ಷ ತೆರಿಗೆದಾರರಿಗೆ ಬ್ಯಾಂಕ್ ಖಾತೆಗಳ ಮೂಲಕ ತೆರಿಗೆ ಮರು ಪಾವತಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.  2012-13ನೇ ಸಾಲಿನ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ  ನೇರ ತೆರಿಗೆ ಮೂಲಕ ರೂ2.72 ಲಕ್ಷ ಕೋಟಿ ಸಂಗ್ರಹವಾಗಿದೆ. ಪ್ರಸಕ್ತ ವರ್ಷ ಒಟ್ಟು ರೂ5.7 ಲಕ್ಷ ಕೋಟಿ ತೆರಿಗೆ ವರಮಾನ ಸಂಗ್ರಹ ಗುರಿ ಸರ್ಕಾರ ಹೊಂದಿದೆ. ಕಳೆದ ವರ್ಷ ರೂ4.95 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ತೆರಿಗೆ ಮರು ಪಾವತಿಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸಲು ಕೇಂದ್ರ ಸರ್ಕಾರ 2010ರಲ್ಲಿ ಬೆಂಗಳೂರಿನಲ್ಲಿ `ಕೇಂದ್ರೀಕೃತ ತೆರಿಗೆ ನಿರ್ವಹಣೆ ಘಟಕ~ (ಸಿಪಿಸಿ) ಸ್ಥಾಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry