ಶುಕ್ರವಾರ, ನವೆಂಬರ್ 22, 2019
20 °C

`ತೆರಿಗೆ ವರಮಾನ ಹೆಚ್ಚಳ'

Published:
Updated:

ನವದೆಹಲಿ (ಪಿಟಿಐ):  ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ 2012-13ನೇ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ್ದ ಗುರಿ ತಲುಪಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಶನಿವಾರ ಇಲ್ಲಿ `ಕೇಂದ್ರ ನೇರ ತೆರಿಗೆ ಸಲಹಾ ಸಮಿತಿ'(ಸಿಡಿಟಿಎಸಿ) ಸಭೆಯಲ್ಲಿ ಮಾತನಾಡಿದ ಅವರು, ತೆರಿಗೆ ಸಂಗ್ರಹ ಹೆಚ್ಚಿದೆ.ಒಟ್ಟಾರೆ ವರಮಾನದಲ್ಲೂ ಏರಿಕೆಯಾಗಿದೆ. ಆದಾಯ ತೆರಿಗೆ ಇಲಾಖೆಯೂ ತೆರಿಗೆ ಪಾವತಿ ಸರಳಗೊಳಿಸಲು ಹಲವು ತಾಂತ್ರಿಕ ಸುಧಾರಣೆ ಕೈಗೊಂಡಿದೆ. ಇವೆಲ್ಲವೂ ತೆರಿಗೆ ಸಂಗ್ರಹ ಹೆಚ್ಚಳ ಮೂಲಕ ಫಲ ನೀಡಿವೆ ಎಂದರು.ತೆರಿಗೆ ಪಾವತಿ ಮತ್ತು ಸಂಗ್ರಹ ಈಗ ಹೆಚ್ಚು ಸುಲಭ ಮತ್ತು ಸರಳವಾಗಿದೆ ಎಂದು `ಸಿಬಿಡಿಟಿ' ಅಧ್ಯಕ್ಷ ಪೂನಂ ಕಿಶೋರ್ ಸಕ್ಸೇನಾ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)