ಸೋಮವಾರ, ಮೇ 23, 2022
30 °C

ತೆರಿಗೆ ವಿವಾದ: ಬಂಡವಾಳ ಹೂಡಿಕೆ ಹಿಂದೇಟಿಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆರಿಗೆ ವಿವಾದಗಳ ಇತ್ಯರ್ಥಕ್ಕೆ ದೀರ್ಘ ಸಮಯ ತೆಗೆದುಕೊಳ್ಳುವುದರಿಂದ ಜಾಗತಿಕ  ಉದ್ದಿಮೆ ಸಂಸ್ಥೆಗಳು ಭಾರತದಲ್ಲಿ ಹಣ ಹೂಡಿಕೆಗೆ ಹಿಂದೇಟು ಹಾಕುತ್ತವೆ ಎಂದು ಜಾಗತಿಕ ಸಲಹಾ ಸಂಸ್ಥೆ ಅರ್ನಸ್ಟ್ ಆಂಡ್ ಯಂಗ್ ಅಭಿಪ್ರಾಯಪಟ್ಟಿದೆ.ಗರಿಷ್ಠ ಪ್ರಮಾಣದ ಬಂಡವಾಳ ಆಕರ್ಷಿಸಲು ಕೇಂದ್ರ ಸರ್ಕಾರವು ಪ್ರಯತ್ನ ಪಡುತ್ತಿದೆ. ಆದರೆ, ಭಾರತದಲ್ಲಿ ವಾಸ್ತವಿಕ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ತೆರಿಗೆ ಸಂಬಂಧಿತ ವಿವಾದಗಳು ಇತ್ಯರ್ಥಗೊಳ್ಳಲು ತುಂಬ ಸಮಯ ಹಿಡಿಯುತ್ತದೆ ಎನ್ನುವುದು ಬಹುರಾಷ್ಟ್ರೀಯ ಸಂಸ್ಥೆಗಳ ಟೀಕೆಯಾಗಿದೆ. ದೇಶದಲ್ಲಿನ ಶೇ 70ರಷ್ಟು ಅಂತರರಾಷ್ಟ್ರೀಯ ತೆರಿಗೆ ವಿವಾದಗಳು ಹಣ ವರ್ಗಾವಣೆ ವಿವಾದಕ್ಕೆ ಒಳಪಟ್ಟಿರುತ್ತವೆ ಎಂದು `ಇಆಂಡ್‌ವೈ~ನ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು, ವಹಿವಾಟು ವಿಸ್ತರಿಸಲು ಜಾಗತಿಕ ಸಂಸ್ಥೆಗಳು ಉತ್ಸುಕವಾಗಿವೆ. ಆದರೆ, ಇಲ್ಲಿ ಹೂಡಿಕೆ ಮತ್ತು ಉದ್ದಿಮೆ ಸ್ಥಾಪನೆ ಮಾರ್ಗದರ್ಶಿ ಸೂತ್ರಗಳು ಸೀಮಿತವಾಗಿವೆ. ತೆರಿಗೆ ವಿವಾದಗಳು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥವಾಗುವುದಿಲ್ಲ. ಹೀಗಾಗಿ ಬಂಡವಾಳ ಹೂಡಿಕೆಗೆ ಹಿಂಜರಿಯುತ್ತವೆ. ತೆರಿಗೆ ವಿವಾದಗಳ ಇತ್ಯರ್ಥಕ್ಕೆ ಭಾರತವು ಜಾಗತಿಕ ನಿಯಮಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.