ಮಂಗಳವಾರ, ಮೇ 24, 2022
30 °C

ತೆರಿಗೆ ಸಂಗ್ರಹ ಶೇ 26ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ 12ರ ವರೆಗಿನ ಅಂಕಿ ಅಂಶದಂತೆ, ಒಟ್ಟು ತೆರಿಗೆ ಸಂಗ್ರಹದಲ್ಲಿ  ಶೇ 26ರಷ್ಟು ಪ್ರಗತಿ ಕಂಡುಬಂದಿದೆ.ನೇರ ಹಾಗೂ ಪರೋಕ್ಷ ತೆರಿಗೆ ಸಂಗ್ರಹ ಕ್ರಮವಾಗಿ ಶೇ 92ರಷ್ಟು ಮತ್ತು ಶೇ 79 ರಷ್ಟು ಪ್ರಗತಿ ದಾಖಲಿಸಿದ್ದು, ಇದು ಉದ್ದೇಶಿತ ವಾರ್ಷಿಕ ಗುರಿಯನ್ನು ಮೀರಲಿದೆ ಎಂದು ಕಂದಾಯ ಕಾರ್ಯದರ್ಶಿ ಸುನಿಲ್ ಮಿತ್ರಾ ತಿಳಿಸಿದ್ದಾರೆ.ಸರ್ಕಾರ 2010-11ನೇ ಸಾಲಿನ ಹಣಕಾಸು ವರ್ಷದಲ್ಲಿ ಪರೋಕ್ಷ ತೆರಿಗೆಯ ಮೂಲಕ ರೂ. 3,36,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಕಸ್ಟಮ್ಸ್ ಮೂಲಕ ಶೇ 62ರಷ್ಟು, ಕೇಂದ್ರ ಅಬಕಾರಿ ತೆರಿಗೆಯ ಮೂಲಕ ಶೇ 35ರಷ್ಟು, ಸೇವಾ ತೆರಿಗೆಯ ಮೂಲಕ ಶೇ 21ರಷ್ಟು ತೆರಿಗೆ ವರಮಾನ ಹರಿದುಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.