ತೆರೆಗೆೆ ಕ್ಲಿಂಟನ್ ರಂಗಿನಾಟ!

7

ತೆರೆಗೆೆ ಕ್ಲಿಂಟನ್ ರಂಗಿನಾಟ!

Published:
Updated:
ತೆರೆಗೆೆ ಕ್ಲಿಂಟನ್ ರಂಗಿನಾಟ!

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಏರುತ್ತಿರುವಂತೆಯೇ ದಶಕಗಳಷ್ಟು ಹಳೆಯದಾದ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮೋನಿಕಾ ಲೆವಿನ್‌ಸ್ಕಿ ಅವರ ವರ್ಣರಂಜಿತ ಪ್ರೇಮ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. 90ರ ದಶಕದ ಕೊನೆಗೆ ವಿಶ್ವದಾದ್ಯಂತ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದ ಮಾಜಿ ಅಧ್ಯಕ್ಷರ ರಂಗಿನಾಟ ಕಿರುತೆರೆಯ ಮೇಲೆ ಮೂಡಿಬರಲು ಸಿದ್ಧವಾಗಿದ್ದು, ಜನರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.ಈ ಹೊಸ ಸಾಕ್ಷ್ಯಚಿತ್ರ ಇದೇ 20ರಂದು ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ. ಕ್ಲಿಂಟನ್ ರಾಜಕೀಯ ಜೀವನ ಮತ್ತು ಹೆಣ್ಣುಬಾಕತನವನ್ನು ಸಾಕ್ಷ್ಯಚಿತ್ರ ಅನಾವರಣಗೊಳಿಸಲಿದೆ. ಶ್ವೇತಭವನದ ಅವರ ಮಾಜಿ ಸಹೋದ್ಯೋಗಿಗಳು, ಗೆಳೆಯರು ಹೊರ ಜಗತ್ತಿಗೆ ಗೊತ್ತಿರದ ಅನೇಕ ಸಂಗತಿಗಳನ್ನು ಬಿಚ್ಚಿಡಲಿದ್ದಾರೆ. ಕ್ಲಿಂಟನ್ ಆಪ್ತ ಮತ್ತು ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಾಗಿದ್ದ ಡಿಕ್ ಮಾರಿಸ್, ಕಾನೂನು ತಜ್ಞ ಕೆನ್ ಗೊರ್ಮ್‌ಲೆ ಅವರು ಮಾಜಿ ಅಧ್ಯಕ್ಷರ ವರ್ಣರಂಜಿತ ವ್ಯಕ್ತಿತ್ವ, ಹೆಣ್ಣುಗಳ ದೌರ್ಬಲ್ಯ ಇತ್ಯಾದಿ ಕುತೂಹಲಕಾರಿ ಅಂಶಗಳನ್ನು ಎಳೆ, ಎಳೆಯಾಗಿ ಬಿಚ್ಚಿಡಲಿದ್ದಾರೆ ಎಂದು ಹೇಳಲಾಗಿದೆ.ಕ್ಲಿಂಟನ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಒಂದು ದಿನಕ್ಕೆ 25 ಮಹಿಳೆಯರೊಂದಿಗೆ ಒಡನಾಟ ಹೊಂದಿದ್ದರು ಎಂಬ ಆಶ್ಚರ್ಯಕರ ವಿಷಯವನ್ನು ಅವರ ಒಂದು ಕಾಲದ ರಾಜಕೀಯ ಆಪ್ತ ಸಲಹೆಗಾರ ಮತ್ತು ಕಚೇರಿ ಉಸ್ತುವಾರಿ ಹೊತ್ತಿದ್ದ ಬೆಟ್‌ಸೆ ರೈಟ್ ಬಹಿರಂಗಪಡಿಸಿದ್ದಾರೆ.ಯಾವ್ಯಾವ ಗೆಳತಿಯರನ್ನು ಕ್ಲಿಂಟನ್ ಆ ದಿನ ಭೇಟಿಯಾಗಬೇಕು ಎಂಬ ಪೂರ್ವನಿಗದಿತ ವೇಳಾಪಟ್ಟಿಯನ್ನು ಅವರಿಗೆ ನೀಡುತ್ತಿದ್ದುದಾಗಿ ಸ್ಮರಿಸಿ ಕೊಂಡಿದ್ದಾರೆ.ಕ್ಲಿಂಟನ್ ಜತೆ ಸಂಬಂಧ ಹೊಂದಿದ ಅವರ ಮಾಜಿ ಮಹಿಳಾ ಸಹೋದ್ಯೋಗಿ ಮಾರ್ಲಾ ಕ್ರೈಡರ್ ಅವರೊಂದಿಗೆ ಕಳೆದ ರಸಮಯ ಘಳಿಗೆಗಳನ್ನೂ ಮೆಲುಕು ಹಾಕಿದ್ದಾರೆ. `ಮಕರಂದ ತುಂಬಿದ ಹೂವಿಗೆ ಮುತ್ತಿಕ್ಕುವ ದುಂಬಿಯಂತೆ~ ಎಂದು ಅವರ ರಸಿಕತೆ ಯನ್ನು ಬಣ್ಣಿಸಿದ್ದಾರೆ. ಮೊದಲ ನೋಟದಲ್ಲಿಯೇ ಅವರಿಗೆ ಪ್ರೇಮಾಂಕುರವಾಗಿ ಅದೆಂತಹುದೋ ಆಕರ್ಷಣೆ ಬೆಳೆದು ಬಿಟ್ಟಿತ್ತು ಎಂದು ಕೆನ್ ಹೇಳಿದ್ದಾರೆ. ಇಂತಹ ಹಲವಾರು ರಂಗಿನಾಟಗಳನ್ನು ಒಡನಾಡಿಗಳು ಬಿಚ್ಚಿಡಲಿದ್ದಾರೆ. ಅದಕ್ಕಾಗಿ ಎಲ್ಲರೂ   ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry