ಶುಕ್ರವಾರ, ಜೂನ್ 18, 2021
22 °C

ತೆರೆಗೆ ಬಂದ ‘ಚಂದ್ರಲೇಖ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಈ ಚಿತ್ರ ಬಿಡುಗಡೆಯ ನಂತರ ಚಿರಂಜೀವಿ ಸರ್ಜಾ, ಖಂಡಿತಾ ಸ್ಟಾರ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ’ ಹೀಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಭರವಸೆ ಮತ್ತು ಅಭಿಮಾನ ತುಂಬಿದ ಮಾತುಗಳಲ್ಲಿ ಹೇಳುತ್ತಿದ್ದರೆ ಚಿರಂಜೀವಿ ಸರ್ಜಾ ಮುಗುಳ್ನಕ್ಕಿದ್ದರು.ಚಿರಂಜೀವಿ ಸರ್ಜಾ ಮತ್ತು ಓಂ ಪ್ರಕಾಶ್ ರಾವ್ ಮೊದಲ ಬಾರಿ ಒಗ್ಗೂಡಿ ಸಿದ್ಧಪಡಿಸಿರುವ ‘ಚಂದ್ರಲೇಖ’ ಚಿತ್ರ ಇಂದು (ಮಾ.7) ತೆರೆಗೆ ಬರುತ್ತಿದೆ. ಇದು ತೆಲುಗಿನ ಹಾರರ್‌ ಚಿತ್ರ ‘ಪ್ರೇಮಕಥಾ ಚಿತ್ರಮು’ದ ಕನ್ನಡ ಅವತರಣಿಕೆ. ಚಿತ್ರ ಬಿಡುಗಡೆಗೂ ಪೂರ್ವ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ನಾಯಕ ನಟನ ಬಗ್ಗೆ ಭರವಸೆಯ ಮಳೆಗರೆಯಿತು.ಲವರ್ ಬಾಯ್, ಆ್ಯಕ್ಷನ್‌ಗಳಲ್ಲಿ ಕಾಣಿಸಿಕೊಂಡಿದ್ದ ಚಿರಂಜೀವಿ ಇಲ್ಲಿ ಕಾಮಿಡಿ ಬಾಯ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿರ್ದೇಶಕರ ಮೇಲಿನ ಭರವಸೆಯೇ ನಾನು ಈ ಪಾತ್ರ ಒಪ್ಪಿಕೊಳ್ಳಲು ಕಾರಣ. ಮೊದಲ ಬಾರಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಧುಕೋಕಿಲ ಮತ್ತು ನಾಗಶೇಖರ್ ಅವರು ನಟನೆಯ ಕೆಲವು ರೀತಿಗಳನ್ನು ಹೇಳಿಕೊಟ್ಟರು’ ಎಂದ ಚಿರಂಜೀವಿ ಸರ್ಜಾ ಅವರ ಮಾತುಗಳಲ್ಲಿ ‘ಚಂದ್ರಲೇಖ’ ಬಗ್ಗೆ ಅಪಾರ ನಿರೀಕ್ಷೆಗಳಿವೆ ಎನ್ನುವುದು ವ್ಯಕ್ತವಾಯಿತು. ‘ನನ್ನ ಕೆಲವು ಸಿನಿಮಾಗಳಲ್ಲಿ ಹಾಡುಗಳು ಡಬ್ಬಾ ರೀತಿ ಇರುತ್ತಿದ್ದವು. ಸಂಗೀತ ನಿರ್ದೇಶಕರೂ ತನ್ನದೇ ಆದ ಸಮರ್ಥನೆಯನ್ನೂ ನೀಡಿದ್ದರು. ಆದರೆ ಇಲ್ಲಿ ಮೂರು ಹಾಡುಗಳು ಅತ್ಯುತ್ತಮವಾಗಿದೆ’ ಎಂದು ಸ್ವವಿಮರ್ಶೆ ಮಾಡಿಕೊಂಡರು ನಿರ್ದೇಶಕ ಓಂ ಪ್ರಕಾಶ್ ರಾವ್‌.ಹಾರರ್ ಸಿನಿಮಾ ಮಾಡಬೇಕು ಎನ್ನುವ ಆಸೆ ಬಹಳ ದಿನಗಳಿಂದ ಅವರಿಗೆ ಇತ್ತಂತೆ. ಆ ಆಸೆ ಈಡೇರಿದ ತೃಪ್ತಿ ಅವರ ಮೊಗದಲ್ಲಿತ್ತು.

ಚಿತ್ರದ ಆರಂಭದಿಂದ ಡಬ್ಬಿಂಗ್ ಕಾರ್ಯದವರೆಗೂ ಎಂಜಾಯ್ ಮಾಡಿದ್ದಾರಂತೆ ನಟ ನಾಗಶೇಖರ್. ಓಂ ಪ್ರಕಾಶ್ ರಾವ್ ಅವರ ಚಿತ್ರ ನಿರ್ಮಾಣ ಯಾವ ರೀತಿ ಭಿನ್ನ ಎನ್ನುವುದನ್ನು ಸಂಕ್ಷಿಪ್ತವಾಗಿ ತೆರೆದಿಟ್ಟರು ನಾಗಶೇಖರ್. ನಿರ್ಮಾಪಕ ಶ್ರೀಧರ ರೆಡ್ಡಿ ಹಾಜರಿದ್ದರು. ನಾಯಕಿ ಶಾನ್ವಿ ಶ್ರೀವಾಸ್ತವ್ ಗೈರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.