ತೆರೆಯ ಮೇಲೆ ಸೈಫೀನಾ ಜೋಡಿ

7

ತೆರೆಯ ಮೇಲೆ ಸೈಫೀನಾ ಜೋಡಿ

Published:
Updated:
ತೆರೆಯ ಮೇಲೆ ಸೈಫೀನಾ ಜೋಡಿ

ಕುರ್ಬಾನ್ ಚಿತ್ರದ ನಂತರ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. `ಏಜೆಂಟ್ ವಿನೋದ್~ ಚಿತ್ರದಲ್ಲಿ.ಕರೀನಾ ಕಳೆದ ವರ್ಷ ಎಲ್ಲ ಖಾನ್‌ಗಳೊಂದಿಗೂ ಪಾತ್ರ ನಿರ್ವಹಿಸಿದ್ದಾಳೆ. ಆದರೆ ನನ್ನೊಡನೆ ಮಾತ್ರ ಅವಳು ಚಂದ ಕಾಣಿಸುತ್ತಾಳೆ. ನಮ್ಮಿಬ್ಬರ ಜೋಡಿಯೇ ಹೆಚ್ಚು ಸೂಕ್ತ ಎಂದೂ ಸೈಫ್ ಅಲಿಖಾನ್ ಹೇಳಿಕೊಂಡಿದ್ದಾರೆ.ಆಮೀರ್ ಖಾನ್‌ನೊಂದಿಗೆ ತ್ರೀ ಈಡಿಯಟ್ಸ್‌ನಲ್ಲಿ ಶಾರುಖ್ ಖಾನ್‌ನೊಂದಿಗೆ ರಾ ಒನ್‌ನಲ್ಲಿ ಸಲ್ಮಾನ್‌ನೊಂದಿಗೆ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದಾಳೆ. ಅವೆಲ್ಲವೂ ಬಾಕ್ಸ್ ಆಫೀಸ್ ಗೆದ್ದ ಚಿತ್ರಗಳೇ ಆಗಿವೆ. ಮಧುರ್ ಭಂಡಾರ್ಕರ್ ಅವರ `ಹೀರೊಯಿನ್~ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾಳೆ. ಅಮೀರ್ ಖಾನ್‌ನೊಂದಿಗೆ `ತಲಾಶ್~ ಚಿತ್ರದಲ್ಲಿಯೂ ನಟಿಸುತ್ತಿದ್ದಾಳೆ. ತನಗಿಂತ ಕಿರಿಯ ಇಮ್ರಾನ್ ಖಾನ್‌ನೊಂದಿಗೆ ಸಹ ನಟಿಸಿ ಸೈ ಅನಿಸಿಕೊಂಡಿದ್ದಾಳೆ. ಆದರೆ `ಏಜೆಂಟ್ ವಿನೋದ್~ ಚಿತ್ರದ ಮಾತೇ ಬೇರೆ. ಇಲ್ಲಿ ನಮ್ಮಿಬ್ಬರ ಜೋಡಿ ಮಿಂಚಲಿದೆ ಎಂದೆಲ್ಲ ಸೈಫ್ ಹೇಳಿಕೊಂಡಿದ್ದಾನೆ.ಈ ಎಲ್ಲ ಜೋಡಿಗಳನ್ನು ನೋಡಿದರೆ, ನನ್ನೊಂದಿಗೆ ಕರೀನಾ ಆಕರ್ಷಕವಾಗಿಯೂ ಇನ್ನಷ್ಟು ಮಾದಕವಾಗಿಯೂ ಕಾಣಿಸಿಕೊಳ್ಳಲಿದ್ದಾಳೆ ಎಂದೂ ಹೇಳಿಕೊಂಡಿದ್ದಾರೆ ಸೈಫ್. ಈ ಸೈಫೀನಾ ಜೋಡಿಯನ್ನು ಎಲ್ಲರೂ ಇಷ್ಟ ಪಡಲಿದ್ದಾರೆ ಎನ್ನುತ್ತಾರೆ ಅವರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry