ಮಂಗಳವಾರ, ಮಾರ್ಚ್ 2, 2021
23 °C
ಲಗೋರಿ: ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ರನ್ನರ್‌ ಅಪ್‌

ತೆಲಂಗಾಣ, ಆಂಧ್ರ ಪ್ರದೇಶ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಂಗಾಣ, ಆಂಧ್ರ ಪ್ರದೇಶ ಚಾಂಪಿಯನ್‌

ವಿಜಾಪುರ: ತೆಲಂಗಾಣ ಮತ್ತು ಆಂಧ್ರಪ್ರದೇಶ ತಂಡದವರು ಸೋಮವಾರ ಮುಕ್ತಾಯಗೊಂಡ ರಾಷ್ಟ್ರಮಟ್ಟದ ಲಗೋರಿ ಚಾಂಪಿಯನ್‌ಷಿಪ್‌ನ ಸೀನಿಯರ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.ಕರ್ನಾಟಕ ಅಮೆಚೂರ್‌ ಲಗೋರಿ ಸಂಸ್ಥೆ ಆಶ್ರಯದಲ್ಲಿ ಸ್ಥಳೀಯ ಜ್ಞಾನಜ್ಯೋತಿ ವಸತಿ ಶಾಲೆಯ ಮೈದಾನದಲ್ಲಿ ನಡೆದ ಬಾಲಕರ ವಿಭಾಗದ ಫೈನಲ್‌ ಪಂದ್ಯಗಳಲ್ಲಿ ತೆಲಂಗಾಣ ತಂಡ ಆಂಧ್ರಪ್ರದೇಶ ವಿರುದ್ಧ 8–4, 2–4, 16–0 ಪಾಯಿಂಟ್‌ಗಳಿಂದ ಜಯ ಸಾಧಿಸಿದರೆ ಆಂಧ್ರದ ಬಾಲಕಿಯರು ಕರ್ನಾಟಕ ತಂಡದವರನ್ನು 21–8,14–6 ಪಾಯಿಂಟ್‌ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು.ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ ಮತ್ತು ಪಂಜಾಬ್‌ ತಂಡದವರು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾ ಗದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿ ತಂಡದವರು ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.ಜೂನಿಯರ್‌ ಬಾಲಕರ ವಿಭಾಗದಲ್ಲಿ ದೆಹಲಿ ತಂಡವನ್ನು 25–10,15–14 ಪಾಯಿಂಟ್‌ಗಳಿಂದ ಮಣಿಸಿ ಹರಿಯಾಣ ತಂಡ ಪ್ರಶಸ್ತಿ ಗಳಿಸಿದರೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ತಂಡದವರು ತಲಾ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡರು.ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದ ಪ್ರಶಸ್ತಿ ಹರಿಯಾಣದ ಪಾಲಾಯಿತು. ಮಹಾರಾಷ್ಟ್ರ ವಿರುದ್ಧ ಈ ತಂಡದವರು 40–30,11–5 ಪಾಯಿಂಟ್‌ಗಳಿಂದ ಜಯ ಗಳಿಸಿದರು. ತೆಲಂಗಾಣವನ್ನು 14–5, 20–18 ಪಾಯಿಂಟ್‌ಗಳಿಂದ ಮಣಿಸಿದ ಕರ್ನಾಟಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.