ಬುಧವಾರ, ಜನವರಿ 22, 2020
28 °C
ನಿರ್ಧಾರಕ್ಕೆ ಬರಲು ಹಿರಿಯ ಸಚಿವರ ಸಮಿತಿ ವಿಫಲ

ತೆಲಂಗಾಣ: ಇಂದು ಮತ್ತೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಂಧ್ರಪ್ರದೇಶ ವಿಭ­ಜನೆಗೆ ಸಂಬಂಧಿಸಿದ ತನ್ನ ವರದಿ ಮತ್ತು ತೆಲಂಗಾಣ ಮೇಲಿನ ಕರಡು ಮಸೂದೆ ಅಂತಿಮಗೊಳಿಸಲು ಹಿರಿಯ ಸಚಿವರ ಸಮಿತಿ ಮಂಗಳವಾರ ವಿಫಲ­ವಾಯಿತು. ಹೀಗಾಗಿ ಕೇಂದ್ರ ಸಂಪುಟಕ್ಕೆ ಇವುಗಳನ್ನು ಸಲ್ಲಿಸುವ ಮುನ್ನ ಮತ್ತೆ ಬುಧವಾರ ಸಭೆ ಸೇರಲು ನಿರ್ಧರಿಸಿತು.ಸಂವಿಧಾನದ 371–ಡಿ ವಿಧಿಯಡಿ ಹೊಸ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಮುಂದು­ವರಿಸುವ ಕುರಿತು ಸಭೆಯಲ್ಲಿ ಸಚಿವರ ಸಮಿತಿ ಚರ್ಚಿಸಿತು. ಇದಲ್ಲದೆ, ತೆಲಂಗಾಣಕ್ಕೆ ರಾಯಲಸೀಮಾದ ಎರಡು ಜಿಲ್ಲೆಗಳನ್ನು ಸೇರಿಸುವ ಪ್ರಸ್ತಾ­ವದ ಬಗ್ಗೆಯೂ ಅದು ಪರಿಶೀಲಿಸಿತು. ಆದರೆ  ವರದಿ ಮತ್ತು ಕರಡು ಮಸೂದೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.ಸಭೆಯಲ್ಲಿ ಸಮಿತಿಯ ಸಚಿವ ಸದಸ್ಯ­ರಲ್ಲದೆ, ರಾಷ್ಟ್ರೀಯ ಭದ್ರತಾ ಸಲಹೆ­ಗಾರ ಶಿವಶಂಕರ ಮೆನನ್, ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಸೇರಿದಂತೆ ಉನ್ನತ ಅಧಿಕಾರಿಗಳು ಸಹ ಭಾಗ­ವಹಿಸಿದ್ದರು.ಸಭೆಯ ಬಳಿಕ ಕೇಂದ್ರ ಸಂಪುಟದಲ್ಲಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುತ್ತಿರುವ ಎಂ. ಪಲ್ಲಂರಾಜು ಸೇರಿದಂತೆ ಸಚಿವರ ನಿಯೋಗವು, ಕೊನೆಯ ಪ್ರಯತ್ನ­ವಾಗಿ ರಾಜ್ಯ ವಿಭಜನೆ­ ವಿರೋ­ಧಿಸಿ ಸಮಿ­ತಿಯ ಅಧ್ಯಕ್ಷ­ರಾದ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರಿಗೆ ಮನವಿ ಸಲ್ಲಿಸಿತು.

ಪ್ರತಿಕ್ರಿಯಿಸಿ (+)