ಶನಿವಾರ, ಮೇ 15, 2021
25 °C

ತೆಲಂಗಾಣ ಚಳುವಳಿ: ರೈಲುಗಳ ಓಡಾಟ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್, (ಐಎಎನ್‌ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಶನಿವಾರ ಬೆಳಿಗ್ಗೆಯಿಂದಲೇ ಎರಡು ದಿನಗಳ ರೈಲು ತಡೆ ಮ್ತತ್ತು ಆಟೊ ರಿಕ್ಷಾಗಳ ಪ್ರತಿಭಟನೆ ಆರಂಭವಾಗಿದ್ದು, ಈಗಾಗಲೇ ಕಳೆದ ಆರು ದಿನಗಳಿಂದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ರಸ್ತೆಗಿಳಿಯದ್ದರಿಂದ ಬಸವಳಿದಿದ್ದ ಜನತೆ ಈಗ ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.

ಸದ್ಯದ ಸ್ಥಿತಿಯಲ್ಲಿ ಯಾವುದೇ ವಾಹನಗಳ ಸೌಕರ್ಯವಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.

ಪ್ರತ್ಯೇಕ ತೆಲಂಗಾಣ ಚಳುವಳಿಗೆ ಬೆಂಬಂಲಿಸಿ ಕಳೆದ ಆರು ದಿನಗಳಿಂದಲೇ ಹೈದರಾಬಾದ್ ಜಿಲ್ಲೆ ಮತ್ತು ತೆಲಂಗಾಣ ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಈಗ ಶನಿವಾರ ಮತ್ತು ಭಾನುವಾರದ ರೈಲುಗಳ ಓಡಾಟವನ್ನು ರದ್ದುಪಡಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.