ಗುರುವಾರ , ಜೂನ್ 24, 2021
21 °C

ತೆಲಂಗಾಣ: ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತೆಲಂಗಾಣ ರಾಜ್ಯ ರಚನೆಗಾಗಿ ಆಂಧ್ರಪ್ರದೇಶವನ್ನು ವಿಭಜಿಸಿದ ವಿಷಯ ತೀವ್ರ ಸಂಘರ್ಷ, ವಿವಾದಕ್ಕೆ ಒಳಗಾಗಿರುವುದನ್ನು ತಾನು ಪರಿಶೀಲಿಸುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್ ಈ ಸಂಬಂಧ ಕೇಂದ್ರದ ಅಭಿಪ್ರಾಯ ಕೇಳಿದೆ.ತೆಲಂಗಾಣ ರಾಜ್ಯ ರಚನೆಯನ್ನು ಪ್ರಶ್ನಿಸಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್‌ಕುಮಾರ್‌ ರೆಡ್ಡಿ ಸೇರಿದಂತೆ ಹಲವರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಎಚ್‌.ಎಲ್‌ . ದತ್ತು ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.ಈ ವಿಷಯದಲ್ಲಿ ಸಂವಿಧಾನಾತ್ಮಕ ಪೀಠ ಮಧ್ಯಪ್ರವೇಶ ಮಾಡುವುದರ ಮೂಲಕ ರಾಜ್ಯ ವಿಭಜನೆಗೆ ತಡೆಯಾಜ್ಞೆ ನೀಡುವ ವಿಚಾರವನ್ನು ಉನ್ನತ ಪೀಠ ಕೈಗೆತ್ತಿಕೊಳ್ಳಬಹುದು ಎಂಬ ಅಭಿಪ್ರಾಯವನ್ನೂ ಪೀಠ ವ್ಯಕ್ತಪಡಿಸಿದೆ. ಮಸೂದೆಗೆ ಇನ್ನೂ ಸಂಸತ್ತಿನ ಅಂಗೀಕಾರ ಸಿಕ್ಕಿರಲಿಲ್ಲವಾದ್ದ­ರಿಂದ ಫೆ.7 ಹಾಗೂ 17ರಂದು ಈ ಸಂಬಂಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಕೋರ್ಟ್ ನಿರಾಕರಿಸಿತ್ತು.ಹೊಸ ರಾಜ್ಯದ ರಚನೆ ಕಾನೂನು­ಬಾಹಿರವಾಗಿದ್ದು ಸಂವಿ­ಧಾ­ನಕ್ಕೆ ವಿರುದ್ಧ­ವಾಗಿದೆ. ರಾಜ್ಯ ವಿಧಾನಸಭೆ ಈ ಮಸೂದೆಯನ್ನು ತಿರಸ್ಕರಿಸಿದರೂ ಸಂಸತ್‌ನಲ್ಲಿ ಅದನ್ನು ಅಂಗೀಕರಿಸಿದ ಕೇಂದ್ರದ ನಿರ್ಧಾರವನ್ನು ಒಟ್ಟು 18 ಅರ್ಜಿದಾರರು ಪ್ರಶ್ನಿಸಿದ್ದಾರೆ.

ಈ ನಡುವೆ ತೆಲಂಗಾಣ ರಾಜ್ಯದ ಸಂಸ್ಥಾಪನಾ ದಿನ ಜೂನ್‌ 2 ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.