ತೆಲಂಗಾಣ ವಿವಾದ : ಹೈಕಮಾಂಡ್‌ಗೆ ಡಿ. 9ರ ಗಡುವು

7

ತೆಲಂಗಾಣ ವಿವಾದ : ಹೈಕಮಾಂಡ್‌ಗೆ ಡಿ. 9ರ ಗಡುವು

Published:
Updated:

 

ಹೈದರಾಬಾದ್ (ಪಿಟಿಐ) : ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಂಬಂಧ ಡಿಸೆಂಬರ್ 9ರೊಳಗಾಗಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವಂತೆ ತೆಲಂಗಾಣ ಪ್ರಾಂತದ ಕಾಂಗ್ರೆಸ್ ಮುಖಂಡರು ಪಕ್ಷದ ಹೈಕಮಾಂಡ್‌ಗೆ ಮಂಗಳವಾರ ಇಲ್ಲಿ ಗಡುವು ನೀಡಿದರು.

ಮುಖ್ಯಮಂತ್ರಿ ಕಿರಣ್ ಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್‌ನಿಂದ ದೆಹಲಿಗೆ ಬುಲಾವ್ ಬಂದ ಬೆನ್ನಲ್ಲೇ ತೆಲಂಗಾಣ ಪ್ರಾಂತದ ಕಾಂಗ್ರೆಸ್ ಮುಖಂಡರು ಪ್ರತ್ಯೇಕ ರಾಜ್ಯ ರಚನೆ ಸಂಬಂಧ ಈ ಗಡುವು ನೀಡಿದ್ದು, ತೆಲಂಗಾಣ ರಚನೆ ಬಗ್ಗೆ  ಪಿ. ಚಿದಂಬರಂ ಗೃಹ ಸಚಿವರಾಗಿದ್ದ ವೇಳೆಯಲ್ಲಿ ನೀಡಿದ್ದ ಹೇಳಿಕೆಯನ್ನು ಇಲ್ಲಿ ನೆನಪಿಸಿದರು.

ಈ ಮಧ್ಯೆ,ತೆಲಂಗಾಣ ಪ್ರಾಂತದ ಕನಿಷ್ಠ 6 ಸಂಸದರೊಂದಿಗೆ ಹಲವು ಶಾಸಕರು ಕಾಂಗ್ರೆಸ್‌ನಿಂದ ಹೊರಬಂದು ಪ್ರತ್ಯೇಕ ರಂಗ ರಚನೆಯತ್ತ ಮುಖಮಾಡುವ ನಿರೀಕ್ಷೆ  ಇದ್ದು, ಇವರೊಂದಿಗೆಎ ಕೆಲವರು ತೆಲಂಗಾಣ ರಾಷ್ಟ್ರೀಯ ಸಮಿತಿ ಸೇರುವ ಸಾಧ್ಯತೆ ಇದೆ.

ತೆಲಂಗಾಣ ಪ್ರಾಂತದ ಈ ಕಾಂಗ್ರೆಸ್ ಸಂಸದರು ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಿಂದ ಹೊರಗುಳಿದಿದ್ದು, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಅವರು ಕರೆದಿದ್ದ ಸಭೆಗೂ ಗೈರು ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry