ತೆಲಂಗಾಣ ಹೋರಾಟ: ಕಲ್ಲಿದ್ದಲು ಪೂರೈಕೆ ಸ್ಥಗಿತ ಭೀತಿ

7

ತೆಲಂಗಾಣ ಹೋರಾಟ: ಕಲ್ಲಿದ್ದಲು ಪೂರೈಕೆ ಸ್ಥಗಿತ ಭೀತಿ

Published:
Updated:

ರಾಯಚೂರು: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ರೈಲು ತಡೆ ಪ್ರತಿಭಟನೆಯನ್ನು ತೆಲಂಗಾಣ ಹೋರಾಟ ಸಮಿತಿಯು ಅ. 15ರಿಂದ ಆರಂಭಿಸಲಿದೆ. ಇದರಿಂದ ರಾಯಚೂರು ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುವ ಕೆಲ ರೈಲುಗಳ ಸಂಚಾರ ಬಂದ್ ಆಗಲಿದೆ.ಈ ಪ್ರತಿಭಟನೆಯಿಂದ ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಪ್ರಯಾಣಿಕರ  ರೈಲುಗಳನ್ನು ಮಾತ್ರ ತಡೆದು ಗೂಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಮಾತ್ರ ಕಲ್ಲಿದ್ದಲು  ಸರಬರಾಜು ಆಗಲಿದೆ.  ಒಂದೇ ರೈಲು ಮಾರ್ಗವಿದ್ದು ಪ್ರತಿಭಟನೆ ಕಾರಣದಿಂದ ಅದು ಬಂದ್ ಆದರೆ ಕಲ್ಲಿದ್ದಲು ತರುವುದು ಕಷ್ಟ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry