ತೆಲುಗಿಗೆ ಯೂನಿಕೋಡ್ ಒಕ್ಕೂಟದ ಪೂರ್ಣ ಸದಸ್ಯತ್ವ

7

ತೆಲುಗಿಗೆ ಯೂನಿಕೋಡ್ ಒಕ್ಕೂಟದ ಪೂರ್ಣ ಸದಸ್ಯತ್ವ

Published:
Updated:

ನ್ಯೂಜೆರ್ಸಿ (ಪಿಟಿಐ): ಅಮೆರಿಕ ಮೂಲದ ಯುನಿಕೋಡ್ ಒಕ್ಕೂಟದ ಪೂರ್ಣ, ಶಾಶ್ವತ ಸದಸ್ವತ್ವನ್ನು ತೆಲುಗು ಭಾಷೆಯು ಪಡೆದುಕೊಂಡಿದೆ.ಇದರಿಂದಾಗಿ ಕಂಪ್ಯೂಟರ್‌ಗಳಲ್ಲಿ ತೆಲುಗು ಭಾಷೆಯ ಲಿಪಿ ಹಾಗೂ ಅಕ್ಷರಗಳು ಬಳಕೆದಾರರ ಸ್ನೇಹಿಯಾಗಲು ಹಾಗೂ ಭಾಷೆಯ ಗುಣಮಟ್ಟ  ಉತ್ತಮಗೊಳ್ಳಲು ಅವಕಾಶ ಕಲ್ಪಿಸಿದೆ.`ಯೂನಿಕೋಡ್ ಒಕ್ಕೂಟದ ಪೂರ್ಣ ಹಾಗೂ ಶಾಶ್ವತ ಸದಸ್ಯತ್ವ ಪಡೆದ ಭಾರತದ ಮೊದಲ ಭಾಷೆ ತೆಲುಗು ಆಗಿದೆ. ಈಗಾಗಲೇ ದೇಶದ ಇತರ ಎರಡು ಭಾಷೆಗಳಾದ ಹಿಂದಿ ಮತ್ತು ತಮಿಳು ಈ ಒಕ್ಕೂಟದ ಸಾಂಸ್ಥಿಕ ಸದಸ್ಯತ್ವವನ್ನು ಹೊಂದಿವೆ ಎಂದು ಆಂಧ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪೊನ್ನಾಲ ಲಕ್ಷ್ಮಯ್ಯ ಹೇಳಿದ್ದಾರೆ.ಆಂಧ್ರಪ್ರದೇಶ ಸರ್ಕಾರವು ಒಕ್ಕೂಟದ ಸದಸ್ಯತ್ವ ಪಡೆದ 10ನೇ ಸಂಸ್ಥೆಯಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗಳಾದ ಆಡೋಬ್ ಸಿಸ್ಟಮ್ಸ, ಆ್ಯಪಲ್, ಮೈಕ್ರೋಸಾಫ್ಟ್ ಕಾರ್ಪೊರೇಷನ್, ಒರಾಕಲ್ ಅಮೆರಿಕಾ, ಗೂಗಲ್, ಐಬಿಎಂ ಮತ್ತು ಎಸ್‌ಎಪಿ ಎಜಿ ಈ ಒಕ್ಕೂಟದ ಸದಸ್ಯತ್ವ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.ಆಂಧ್ರ ಸಚಿವರು ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ತೆಲುಗು ಇಂಟರ್‌ನೆಟ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ತೆಲುಗು ಭಾಷೆಯು ಯೂನಿಕೋಡ್ ಒಕ್ಕೂಟದ ಪೂರ್ಣ ಸದಸ್ವತ್ವ ಪಡೆದ ವಿಷಯವನ್ನು ಅವರು ಅಲ್ಲಿ ಪ್ರಕಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry