ತೆಲುಗು ಯುವ ನಟ ಉದಯ್ ಕಿರಣ್ ಆತ್ಮಹತ್ಯೆ

7

ತೆಲುಗು ಯುವ ನಟ ಉದಯ್ ಕಿರಣ್ ಆತ್ಮಹತ್ಯೆ

Published:
Updated:

ಹೈದರಾಬಾದ್ (ಪಿಟಿಐ):  ತೆಲುಗಿನ ಯುವ ನಟ ಉದಯ್ ಕಿರಣ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ  ತಿಳಿಸಿದ್ದಾರೆ.

ಇಲ್ಲಿನ ಶ್ರೀನಗರ ಕಾಲೋನಿಯಲ್ಲಿರುವ ತಮ್ಮ ಪ್ಲಾಟ್‌ನಲ್ಲಿ ಭಾನುವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕೌಟುಂಬಿಕ ಕಲಹ ಅಥವಾ ಮಾನಸಿ ಕ ಖಿನ್ನತೆಯಿಂದಾಗಿ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು  ತನಿಖೆ ನಡೆಸುತ್ತಿದ್ದಾರೆ.ಚಿತ್ರಂ, ನುವ್ವು ನೇನು, ಮನಸಂತಾ ನುವ್ವೆ ಉದಯ್ ಕಿರಣ್ ನಟಿಸಿದ ಜನಪ್ರಿಯ ಚಿತ್ರಗಳು. 2001ರಲ್ಲಿ ಉದಯ್ ಕಿರಣ್‌ಗೆ ಫಿಲಂ ಫೇರ್ ಪ್ರಶಸ್ತಿ ಸಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry