ಶುಕ್ರವಾರ, ನವೆಂಬರ್ 22, 2019
27 °C

ತೆಲುಗು ಸಾಹಿತಿ ರಾವುರಿಗೆ ಜ್ಞಾನಪೀಠ

Published:
Updated:
ತೆಲುಗು ಸಾಹಿತಿ ರಾವುರಿಗೆ ಜ್ಞಾನಪೀಠ

ನವದೆಹಲಿ (ಪಿಟಿಐ): ತೆಲುಗು ಲೇಖಕ ಡಾ.ರಾವುರಿ ಭಾರದ್ವಾಜ ಅವರು 2012ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೇವಲ 8ನೇ ತರಗತಿವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದಿರುವ 86 ವರ್ಷದ ಭಾರದ್ವಾಜ ಅವರು 37 ಕಥಾ ಸಂಕಲನಗಳು, 17 ಕಾದಂಬರಿಗಳು ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ.ಬದುಕಿನ ವಿವಿಧ ಮಗ್ಗುಲುಗಳನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿರುವ ಭಾರದ್ವಾಜ ಅವರ ಪುಸ್ತಕಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ. ಅಲ್ಲದೇ, ಹಲವು ಸಂಶೋಧನೆಗಳಿಗೂ ಅವು ಮೂಲಾಧಾರವಾಗಿವೆ. ಹೆಸರಾಂತ ಕವಿ ಸೀತಾಕಾಂತ್ ಮಹಾಪಾತ್ರ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಪ್ರಕಟಿಸಿದೆ.

ಪ್ರತಿಕ್ರಿಯಿಸಿ (+)