ತೆಹ್ರಿ ಲೋಕಸಭಾ ಕ್ಷೇತ್ರ ಬಿಜೆಪಿ ಮಡಿಲಿಗೆ, ಮುಖ್ಯಮಂತ್ರಿ ಪುತ್ರನಿಗೆ ಸೋಲು

7

ತೆಹ್ರಿ ಲೋಕಸಭಾ ಕ್ಷೇತ್ರ ಬಿಜೆಪಿ ಮಡಿಲಿಗೆ, ಮುಖ್ಯಮಂತ್ರಿ ಪುತ್ರನಿಗೆ ಸೋಲು

Published:
Updated:

ಡೆಹ್ರಾಡೂನ್ (ಪಿಟಿಐ) : ಉತ್ತರಾಖಂಡದ ತೆಹ್ರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಾಲಾ ರಾಜ್ಯ ಲಕ್ಷ್ಮಿ ಶಹಾ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸಾಕೇತ ಬಹುಗುಣ ಅವರನ್ನು ಪರಾಭವಗೊಳಿಸಿ ಕ್ಷೇತ್ರವನ್ನು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿದ್ದಾರೆ.ಸಾಕೇತ್ ಬಹುಗುಣ ಅವರು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರ ಪುತ್ರ.ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿದ್ದ ತೆಹ್ರಿ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಸ್ಪರ್ದೆ ಇತ್ತು. 14 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆದಾಗ ಬಿಜೆಪಿಯ ಮಾಲಾ ರಾಜ್ಯಲಕ್ಷ್ಮಿ ಶಹಾ ಅವರು  ಕಾಂಗ್ರೆಸ್‌ನ ಸಾಕೇತ್ ಬಹುಗುಣ ವಿರುದ್ಧ 18 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.ಸಿತಾರಗಂಜ್ ವಿಧಾನಸಭಾ ಕ್ಷೇತ್ರದ ಗೆಲುವನ್ನು ಅನುಸರಿಸಿ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ರಾಜೀನಾಮೆ ನೀಡಿದ್ದರಿಂದ ತೆಹ್ರಿ ಲೋಕಸಭಾ ಸಭಾ ಸ್ಥಾನ ತೆರವಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry