ತೇಜಶ್ರೀಗೆ ಜಿಎಸ್‌ಎಸ್ ಪ್ರಶಸ್ತಿ

7

ತೇಜಶ್ರೀಗೆ ಜಿಎಸ್‌ಎಸ್ ಪ್ರಶಸ್ತಿ

Published:
Updated:

ಬೆಂಗಳೂರು: `ಶೂದ್ರ' ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪತ್ರಿಕೆಯು ನಡೆಸಿದ 2012ನೇ ಸಾಲಿನ `ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಗೌರವ ಕಾವ್ಯ ಸ್ಪರ್ಧೆ'ಯಲ್ಲಿ ಯುವ ಲೇಖಕಿ ಜ.ನಾ.ತೇಜಶ್ರೀ ಅವರ `ಅವನರಿವಲ್ಲಿ' ಹಾಗೂ `ಉಸ್ರುಬುಂಡೆ' ಕವನ ಸಂಕಲನಗಳು ಪ್ರಶಸ್ತಿಗೆ ಪಾತ್ರವಾಗಿವೆ.ಪ್ರಶಸ್ತಿಯ ಮೊತ್ತ 10 ಸಾವಿರ ರೂಪಾಯಿ . ಜನವರಿ 6ರಂದು ನಡೆಯುವ `ಶೂದ್ರ'ದ ತಿಂಗಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ವಿಮರ್ಶಕ ಡಾ.ಎಚ್. ಎಸ್.ರಾಘವೇಂದ್ರ ರಾವ್ ತೀರ್ಪುಗಾರರಾಗಿದ್ದರು ಎಂದು ಪತ್ರಿಕೆ ಸಂಪಾದಕ ಶೂದ್ರ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry