ಶನಿವಾರ, ಜನವರಿ 25, 2020
15 °C

ತೇಜ್‌ಪಾಲ್‌ಗೆ ಮತ್ತೊಮ್ಮೆ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ, ಗೋವಾ (ಪಿಟಿಐ): ಮಹಿಳಾ ಸಹದ್ಯೋಗಿ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಎದುರಿಸುತ್ತಿರುವ ತೆಹೆಲ್ಕಾ ನಿಯತಕಾಲಿಕೆಯ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರನ್ನು ಬುಧವಾರ ಇಲ್ಲಿ ಎರಡನೇ ಸುತ್ತಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

‘ತೇಜ್‌ಪಾಲ್‌ ಅವರನ್ನು ಇಂದು (ಬುಧವಾರ) ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಮೊದಲು ಡಿಸೆಂಬರ್‌ 2 ರಂದು ತೇಜ್‌ಪಾಲ್‌ ಅವರನ್ನು  ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿತ್ತು.

ಅತ್ಯಾಚಾರ ಪ್ರಕರಣ ಸಂಬಂಧ  ತೇಜ್‌ಪಾಲ್ ಅವರು‌ ಆರು ದಿನಗಳ ಪೊಲೀಸ್‌ ವಶದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)