ಸೋಮವಾರ, ಜನವರಿ 20, 2020
29 °C

ತೇಜ್‌ಪಾಲ್‌ಗೆ ಲೈಂಗಿಕ ಸಾಮರ್ಥ್ಯದ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆಪಾದನೆ ಮೇಲೆ ಪೊಲೀಸ್ ವಶದಲ್ಲಿರುವ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರನ್ನು ಸೋಮವಾರ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಲೈಂಗಿಕ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಲಾಯಿತು.

ಗೋವಾ ಪೊಲೀಸರು ತೇಜ್‌ಪಾಲ್‌ ಅವರನ್ನು ಲೈಂಗಿಕ ಸಾಮರ್ಥ್ಯದ ಪರೀಕ್ಷೆಗಾಗಿ ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದರು.

ತೇಜ್‌ಪಾಲ್‌ ಅವರನ್ನು ಭಾನುವಾರ ನ್ಯಾಯಾಲಯವು ಆರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತ್ತು. ಬಳಿಕ ಗೋವಾ ಅಪರಾಧ ವಿಭಾಗದ ಪೊಲೀಸರು ಅವರನ್ನು ಐದು ತಾಸುಗಳ ವಿಚಾರಣೆಗೆ ಗುರಿ­ಪಡಿಸಿದ್ದರು.

 

ಪ್ರತಿಕ್ರಿಯಿಸಿ (+)