ಮಂಗಳವಾರ, ಜೂನ್ 15, 2021
27 °C

ತೇರುಬೀದಿ ಜಾತ್ರೆ ಅಂಗಡಿ ತೆರವಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ: ಇಲ್ಲಿನ ತೇರು ಬೀದಿಯಲ್ಲಿ ಜಾತ್ರೆಯ ವ್ಯಾಪಾರಕ್ಕೆಂದು ಬಂದಿದ್ದ ಅಂಗಡಿಗಳಿಗೆ ಶೀಘ್ರ ತೆರವು ಗೊಳಿಸಬೇಕು ಎಂದು ಪೊಲೀಸರು ನೀಡಿದ್ದ ಲಿಖಿತ ನೋಟಿಸನ್ನು ಖಂಡಿಸಿ ಭಾನುವಾರ ವ್ಯಾಪಾರಸ್ಥರು, ಗ್ರಾ.ಪಂ. ಸದಸ್ಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಜಾತ್ರೆಯಲ್ಲಿ ರಥೋತ್ಸವ ಜರುಗಿದ ನಂತರ ಮಕ್ಕಳ ಆಟಿಕೆ ಸಾಮಾಗ್ರಿ, ಬಳೆ ಅಂಗಡಿಗಳು ತೇರು ಬೀದಿಯಲ್ಲಿ ವ್ಯಾಪಾರ ಮಾಡುವುದು ರೂಢಿ. ಆದರೆ, ಮಾರ್ಚ್ 19ರಂದು ಜರುಗಲಿರುವ ಮರಿ ಪರಿಷೆಯಲ್ಲಿ ಭಕ್ತರಿಗೆ ತೊಂದರೆ ಆಗುತ್ತದೆ ಎಂದು ಪೊಲಿಸರು 18ರ ಸಂಜೆ 5ರ ಒಳಗೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಲಿಖಿತ ನೋಟಿಸ್ ನೀಡಿದ್ದರು.

ಇದನ್ನು ಖಂಡಿಸಿ ವ್ಯಾಪಾರಸ್ಥರು, ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಪೊಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದಾಗ, ಜಿ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಪೊಲಿಸರು ಸೋಮವಾರ ನಡೆಯುವ ಮರಿಪರಿಷೆಯಲ್ಲಿ ತೇರನ್ನು ಎಳೆಯಲಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ನೋಟಿಸ್ ನೀಡಿದ್ದಾರೆ. ಮರಿ ಪರಿಷೆಯಲ್ಲಿ ಯಾವುದೇ ತೇರನ್ನು ಎಳೆಯುವುದಿಲ್ಲ. ಕೇವಲ ಉತ್ಸವ ಮಾತ್ರ ಜರುಗುತ್ತದೆ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟರು. ಜಾತ್ರೆಗೆ ಬಂದಂತಹ ವ್ಯಾಪಾರಸ್ಥರಿಗೆ ಗ್ರಾ.ಪಂ. ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ನಂತರ ದೂರವಾಣಿ ಮೂಲಕ ಶಾಸಕ ಎನ್.ವೈ. ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ, ವ್ಯಾಪಾರಸ್ಥರಿಂದ ಜಾತ್ರೆಗೆ ಯಾವುದೇ ತೊಂದರೆ ಇಲ್ಲವೆಂದು ಮನವರಿಕೆ ಮಾಡಿಕೊಟ್ಟ ನಂತರ ತೆರವುಗೊಳಿಸುವ ಕಾರ್ಯಕ್ಕೆ ಪೊಲೀಸರು ತಾತ್ಕಾಲಿಕವಾಗಿ ತಡೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮುನಿಯಪ್ಪ, ಗ್ರಾ.ಪಂ. ಸದಸ್ಯರಾದ ಎಂ. ಬಸಣ್ಣ, ಮುನ್ಸೂರ್, ಬಸವರಾಜ್, ಮುಖಂಡರಾದ ಎಂ.ವೈ.ಟಿ. ಸ್ವಾಮಿ, ವೇಣುಗೋಪಾಲ್, ಕೆ.ಟಿ. ಸ್ವಾಮಿ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.