ತೈಲೋತ್ಪನ್ನ ಬೆಲೆ ಏರಿಕೆ ಅನಿವಾರ್ಯ

7

ತೈಲೋತ್ಪನ್ನ ಬೆಲೆ ಏರಿಕೆ ಅನಿವಾರ್ಯ

Published:
Updated:

ಅಮೃತಸರ (ಐಎಎನ್‌ಎಸ್): ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುವುದು ತುರ್ತು ಅಗತ್ಯವಾಗಿದೆ ಎಂದಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಸ್.ಜೈಪಾಲ್ ರೆಡ್ಡಿ, ಈ ಬಗ್ಗೆ ಸದ್ಯ ಯಾವುದೇ ನಿರ್ಧಾರ ಆಗಿಲ್ಲ ಎಂದು ಹೇಳಿದರು.ತುರ್ಕ್‌ಮೆನಿಸ್ತಾನ್-ಅಫ್ಘಾನಿಸ್ತಾನ್- ಪಾಕಿಸ್ತಾನ್-ಭಾರತ ನಡುವಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೊಳವೆ ಮಾರ್ಗ ನಿರ್ಮಾಣ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲು ತುರ್ಕ್‌ಮೆನಿಸ್ತಾನದ `ಅಶ್ಗಾಬಾತ್~ ನಗರಕ್ಕೆ ತೆರಳುವ ಮಾರ್ಗ ಮಧ್ಯೆ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಾಲರ್ ಎದುರು ರೂಪಾಯಿ ಕುಸಿತ ಮುಂದುವರಿದಿರುವುದು ತೈಲ ಕಂಪೆನಿಗಳನ್ನು ಇನ್ನಷ್ಟು ನಷ್ಟಕ್ಕೆ ದೂಡಲಿದೆ.

 

ತೈಲ ಕಂಪೆನಿಗಳು ಒತ್ತಾಯಿಸದೇ ಇದ್ದರೂ ಬೆಲೆ ಏರಿಕೆ  ತಕ್ಷಣದ ಅನಿವಾರ್ಯ ಕ್ರಮವಾಗಲಿದೆ. ಬೆಲೆ ಏರಿಕೆ ಯಾವಾಗ-ಎಷ್ಟು ಎಂಬುದನ್ನೂ ಈಗಲೇ ಹೇಳಲಾಗುವುದಿಲ್ಲ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry