ತೈಲ ಆಮದಿಗೆ ಪಾಕ್ ನಕಾರ

7

ತೈಲ ಆಮದಿಗೆ ಪಾಕ್ ನಕಾರ

Published:
Updated:

ಇಸ್ಲಾಮಾಬಾದ್ (ಪಿಟಿಐ): ಭಾರತದಿಂದ ಹೈ ಸ್ಪೀಡ್ ಡೀಸೆಲ್ ಮತ್ತು ಜೆಟ್ ಇಂಧನ ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರಾಕರಿಸಿದೆ.ಭದ್ರತಾ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಂದು ವೇಳೆ ಭಾರತ ತೈಲ ಪೂರೈಕೆ ಸ್ಥಗಿತಗೊಳಿಸಿದರೆ ಹೇಗೆಂಬ ಭೀತಿಯ ಹಿನ್ನೆಲೆಯಲ್ಲಿ ಪಾಕ್ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೋ ಕಾರಣದಿಂದ ಭಾರತವು ಹೈಸ್ಪೀಡ್ ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆ ಸ್ಥಗಿತಗೊಳಿಸಿದರೆ ದೇಶದ ಭದ್ರತೆಗೇ ಅಪಾಯ ಎದುರಾಗಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.ಕುವೈತ್ ಪೆಟ್ರೋಲಿಯಂ ಸಂಸ್ಥೆಯೊಂದಿಗೆ ಪಾಕ್ ದೀರ್ಘಕಾಲೀನ ಒಪ್ಪಂದ ಮಾಡಿಕೊಂಡಿದ್ದು, ಹೀಗಾಗಿ ಭಾರತದಿಂದ ಡೀಸೆಲ್ ಆಮದು ಮಾಡಿಕೊಳ್ಳಲು ಆಗದು. ತೈಲಕ್ಕಾಗಿ ಭಾರತವನ್ನು ಅವಲಂಬಿಸುವುದಕ್ಕಿಂತ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸುವುದೇ ಸೂಕ್ತ ಎಂಬ ಮಾತುಗಳೂ ಕೇಳಿಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry