ಬುಧವಾರ, ಅಕ್ಟೋಬರ್ 16, 2019
28 °C

ತೈಲ: ಇರಾನ್ ಅವಲಂಬನೆ ಕೈಬಿಡಲು ಸಲಹೆ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತವು ಕಚ್ಚಾ ತೈಲ ಪಡೆಯಲು ಇರಾನ್ ಮೇಲೆ ಹೊಂದಿರುವ ಅವಲಂಬನೆಯನ್ನು ತಗ್ಗಿಸುವುದು ಒಳಿತು ಎಂದು ಒಬಾಮ ಆಡಳಿತ ಆಶಿಸಿದೆ.

ಇರಾನ್ ಮೇಲೆ ಇನ್ನಷ್ಟು ಕಠಿಣ ವಿಧಿಗಳನ್ನು ಹೇರುವ ಹಿನ್ನೆಲೆಯಲ್ಲಿ ಅಮೆರಿಕ ಈ ಒತ್ತಾಸೆಗೆ ಮುಂದಾಗಿದ್ದು ಈಗಾಗಲೇ ಈ ದಿಸೆಯಲ್ಲಿ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರಾದ ವಿಕ್ಟೋರಿಯಾ ನ್ಯುಲಾಂಡ್ ತಿಳಿಸಿದ್ದಾರೆ.

Post Comments (+)