ಶುಕ್ರವಾರ, ಫೆಬ್ರವರಿ 26, 2021
22 °C
ನಿತ್ಯ 36.8 ಲಕ್ಷ ಬ್ಯಾರಲ್‌ ಬೇಡಿಕೆ

ತೈಲ ಬಳಕೆ: 3ನೇ ಸ್ಥಾನಕ್ಕೆ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೈಲ ಬಳಕೆ: 3ನೇ ಸ್ಥಾನಕ್ಕೆ ಭಾರತ

ನವದೆಹಲಿ (ಪಿಟಿಐ): 2025ರ ವೇಳೆಗೆ ಭಾರತವು ತೈಲ ಬಳಕೆಯಲ್ಲಿ ಜಪಾ­ನನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಅಮೆರಿಕದ ಇಂಧನ ಮಾಹಿತಿ ಇಲಾಖೆ (ಇಐಎ) ಅಂದಾಜು ಮಾಡಿದೆ.ಸದ್ಯ ಅತಿ ಹೆಚ್ಚು ತೈಲ ಬಳಸುತ್ತಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಜಪಾನ್‌ ಮೊದಲ ಮೂರು ಸ್ಥಾನಗಳಲ್ಲಿವೆ. ‘ಇಐಎ’ನ ಮುನ್ನೋಟ ವರದಿಯಂತೆ ಭಾರತದ ತೈಲ ಬಳಕೆಯು ಪ್ರತಿ ದಿನ 36.8 ಲಕ್ಷ ಬ್ಯಾರಲ್‌ಗಳಷ್ಟಿದೆ. ಇದು 2025ರ ವೇಳೆಗೆ 51.9 ಲಕ್ಷ ಬ್ಯಾರಲ್‌ಗಳಿಗೆ ಏರಿಕೆ ಕಾಣಲಿದೆ. 2012ರಲ್ಲಿ ಜಪಾನಿನ ತೈಲ ಬಳಕೆ ಪ್ರತಿ ದಿನ 47.5 ಲಕ್ಷ ಬ್ಯಾರ್‌ಗಳಷ್ಟಿತ್ತು. ಇದು 20125ರ ವೇಳಗೆ 43.8 ಲಕ್ಷ ಬ್ಯಾರಲ್‌ಗಳಿಗೆ ತಗ್ಗುವ ನಿರೀಕ್ಷೆ ಇದೆ.  ಸದ್ಯ ಅಮೆರಿಕ ಪ್ರತಿ ದಿನ 182 ಲಕ್ಷ ಬ್ಯಾರ್‌ಗಳಷ್ಟು ಮತ್ತು ಚೀನಾ 103 ಲಕ್ಷ ಬ್ಯಾರ್‌ಗಳಷ್ಟು ತೈಲ ಬಳಸುತ್ತಿವೆ. ಇವೆರಡು ಕ್ರಮವಾಗಿ ವಾರ್ಷಿಕ ಸರಾಸರಿ ಶೇ 2.5ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಭಾರತದ ತೈಲ ಬಳಕೆ ಸರಾಸರಿ ವಾರ್ಷಿಕ ಶೇ 3ರಷ್ಟಿದೆ.

ಇದು ಪ್ರಪಂ­ಚದ ಉಳಿದ ದೇಶಗಳಿಗಿಂತ ಹೆಚ್ಚು. ಒಟ್ಟು ಬೇಡಿಕೆಯ ಶೇ 80ರಷ್ಟು ತೈಲ­ವನ್ನು ಭಾರತ ಆಮದು ಮಾಡಿ­ಕೊಳ್ಳು­ತ್ತಿದೆ. ಇದೇ ಸರಾಸರಿ ಮುಂದು­ವ­ರಿದರೆ 20­20ರ ವೇಳೆಗೆ ಭಾರತದ ಪ್ರಪಂಚದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ನಂ.1 ದೇಶ­ವಾ­ಗಲಿದೆ  ಎಂದೂ ‘ಇಐಎ’ ವಿಶ್ಲೇಷಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.