ಸೋಮವಾರ, ಏಪ್ರಿಲ್ 12, 2021
25 °C

ತೈಲ ಬಿಕ್ಕಟ್ಟು; ಕುಸಿದ ಸೂಚ್ಯಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 264 ಅಂಶಗಳಷ್ಟು ಕುಸಿತ ಕಂಡಿತು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರೆದಿರುವ ರಾಜಕೀಯ ಅಸ್ಥಿರತೆ, ಏರುತ್ತಿರುವ ಕಚ್ಚಾ ತೈಲದ ಬೆಲೆ  ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ಹೊಸ ರಾಜಕೀಯ ಬೆಳವಣಿಗೆಗಳು ಪೇಟೆಯ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದವು.ತೈಲ ಬೆಲೆ ಏರಿಕೆಯಿಂದ ಹಣದುಬ್ಬರ ದರ ಹೆಚ್ಚಬಹುದು ಎನ್ನುವ ಸೂಚನೆಗಳು ದಟ್ಟವಾಗಿದ್ದು, ಇದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಮತ್ತೊಮ್ಮೆ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಸಂಗತಿ ಕೂಡ ಸೂಚ್ಯಂಕ ಕುಸಿಯಲು ಕಾರಣವಾಗಿದೆ. ಸದ್ಯದ ಪೇಟೆ ವಹಿವಾಟನ್ನು ಕಚ್ಚಾ ತೈಲದ ಬೆಲೆಯೇ ತೈಲ ನಿರ್ಧರಿಸುತ್ತಿರುವುದರಿಂದ, ಈ ಭಯದ  ಹಿನ್ನೆಲೆಯಲ್ಲಿ  ವಾಹನ ತಯಾರಿಕಾ ಕ್ಷೇತ್ರದ ಷೇರುಗಳ  ಮಾರಾಟ ಒತ್ತಡವು ಧಿಡೀರ್ ಹೆಚ್ಚಿದೆ. ದಿನದ ವಹಿವಾಟನ್ನು 18,222 ಅಂಶಗಳಿಗೆ ಪೂರ್ಣಗೊಳಿಸಿದ ಸೂಚ್ಯಂಕ ಶೇ 1.43ರಷ್ಟು ಕುಸಿತ ಕಂಡಿತು. ಪ್ರಮುಖ ಕಂಪೆನಿಗಳು ಶೇ 0.19ರಿಂದ ಶೇ 2.55ರಷ್ಟು ನಷ್ಟ ಅನುಭವಿಸಿದವು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 75 ಅಂಶಗಳಷ್ಟು ಕುಸಿದು, 5,463 ಅಂಶಗಳಿಗೆ ವಹಿವಾಟು ಕೊನೆಗೊಂಡಿತು.  ‘ಡಿಎಂಕೆ’ಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.