ತೈಲ ಬೆಲೆ ಹೆಚ್ಚಳ: ಕಾರು ಮಾರಾಟ ಕುಸಿತ

ಮಂಗಳವಾರ, ಜೂಲೈ 16, 2019
26 °C

ತೈಲ ಬೆಲೆ ಹೆಚ್ಚಳ: ಕಾರು ಮಾರಾಟ ಕುಸಿತ

Published:
Updated:

ನವದೆಹಲಿ (ಪಿಟಿಐ): ತೈಲ ಬೆಲೆ ಹೆಚ್ಚಳ ಮತ್ತು ಬ್ಯಾಂಕ್ ಬಡ್ಡಿ ದರಗಳ ಏರಿಕೆಯ ಪರಿಣಾಮ ಮೇ ತಿಂಗಳಲ್ಲಿ ಕಾರುಗಳ ಒಟ್ಟು ಮಾರಾಟ ಗಣನೀಯ ಕುಸಿತ ದಾಖಲಿಸಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಕಾರು ಮಾರಾಟ ಶೇ 30ರಷ್ಟು ಪ್ರಗತಿ ಕಂಡು,ದಾಖಲೆಯ  ಮಟ್ಟ ತಲುಪಿತ್ತು. ಆದರೆ, ಪ್ರಸಕ್ತ ಅವಧಿಯಲ್ಲಿ ಆಹಾರ ಹಣದುಬ್ಬರ ಒತ್ತಡ ಮತ್ತು ತೈಲ ಬೆಲೆ ಹೆಚ್ಚಳ ಗ್ರಾಹಕರ ಕಾರು ಖರೀದಿಸುವ ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿಗಳು ಮೇ ತಿಂಗಳಲ್ಲಿ ಮಂದಗತಿಯ ಮಾರಾಟ ಪ್ರಗತಿ ದಾಖಲಿಸಿವೆ.ದೇಶದ ಮುಂಚೂಣಿ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಶೇ ಶೇ 3.9ರಷ್ಟು ಮಾತ್ರ ಮಾರಾಟ ಪ್ರಗತಿ ದಾಖಲಿಸಿದೆ. ಪ್ರತಿಸ್ಪರ್ಧಿ ಹುಂಡೈ ಮೋಟಾರ್ ಇಂಡಿಯಾ ಶೇ 14ರಷ್ಟು ಏರಿಕೆ ಕಾಯ್ದುಕೊಂಡಿದೆ. ಪ್ರಯಾಣಿಕ ವಾಹನಗಳ ಸರಣಿಯಲ್ಲಿ ಟಾಟಾ ಮೋಟಾರ್ಸ್ ಮಾರಾಟ ಶೇ 9ರಷ್ಟು ಕುಸಿತ ಕಂಡಿದೆ.ಮಾರುತಿ ಸುಜುಕಿ 93,519 ಕಾರುಗಳನ್ನು ಮಾರಾಟ ಮಾಡಿದರೆ, ಹುಂಡೈ ಮೋಟಾರ್‌ನ 31,123 ವಾಹನಗಳು  ಮಾರಾಟವಾಗಿವೆ. ಟಾಟಾ ಮೋಟಾ ರ್ಸ್ ಕಳೆದ ವರ್ಷದ ಇದೇ ಅವಧಿಯಲ್ಲಿ  21,324 ವಾಹನಗಳನ್ನು ಮಾರಾಟ ಮಾಡಿತ್ತು, ಪ್ರಸಕ್ತ ಅವಧಿಯಲ್ಲಿ ಇದು 19,401ಕ್ಕೆ ಇಳಿಕೆಯಾಗಿದೆ.ಕಳೆದ ವರ್ಷದ ಮೇ ತಿಂಗಳಲ್ಲಿ ಒಟ್ಟು  19,82,702 ವಾಹನಗಳು ಮಾರಾಟವಾಗಿತ್ತು. ಇದು ಗರಿಷ್ಠ ತಿಂಗಳ ಮಾರಾಟವಾಗಿತ್ತು. ಆದರೆ,  ಪೆಟ್ರೋಲ್‌ಗೆ  ್ಙ5 ಹೆಚ್ಚಿರುವುದು ಮಾರಾಟ ಕುಸಿಯಲು ಪ್ರಮುಖ ಕಾರಣವಾಗಿದೆ.ಏಪ್ರಿಲ್‌ನಲ್ಲಿ ಶೇ 9ರಷ್ಟಿದ್ದ ವಾಹನ ಸಾಲದ ಬಡ್ಡಿ ದರಗಳು ಮೇ ಅಂತ್ಯಕ್ಕೆ ಶೇ 12ರಷ್ಟಾಗಿದೆ. ` ಒಮ್ಮೆ ಪೆಟ್ರೋಲ್ ದರ ಏರಿಕೆಯಾದರೆ, ನಂತರ ಮಾರಾಟ ಸಹಜ ಸ್ಥಿತಿಗೆ ಬರಲು 6ರಿಂದ 8 ವಾರ ತೆಗೆದುಕೊಳ್ಳುತ್ತದೆ. ಮೊದಲ ಬಾರಿ ಕಾರು ಖರೀದಿಸುವವರು ತೈಲ ಬೆಲೆ ಹೆಚ್ಚುತ್ತಿದ್ದಂತೆ, ತಮ್ಮ ನಿರ್ಧಾರವನ್ನು ಮತ್ತಷ್ಟು ದಿನ ಮುಂದೂಡುತ್ತಾರೆ.ಒಟ್ಟಿನಲ್ಲಿ ಗ್ರಾಹಕ  ವಾಹನ  ಖರೀದಿಸಲು ಮರು ಮನಸ್ಸು ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾನೆ~ ಎನ್ನುತ್ತಾರೆ ಮಾರುತಿ ಸುಜುಕಿ ಇಂಡಿಯಾದ  ಮಾರುಕಟ್ಟೆ ಮುಖ್ಯಸ್ಥ ಮಯಾಂಕ್ ಫಾರೀಕ್.ತೈಲ ಬೆಲೆ ಹೆಚ್ಚಳದಿಂದ ಪ್ರಮುಖವಾಗಿ ಸಣ್ಣ ಕಾರುಗಳ ಮಾರುಕಟ್ಟೆ ಕುಸಿದಿದೆ. ಮಾರುತಿ ಸುಜುಕಿ ಕಂಪೆನಿಯ `ಎ-2~ ಸರಣಿಯ ಆಲ್ಟೋ, ವ್ಯಾಗನ್-ಆರ್, ಎಸ್ಟಿಲೊ, ಸ್ವಿಟ್, ಎ-ಸ್ಟಾರ್, ರಿಟ್ಜ್, ಮಾರಾಟ ಶೇ 2.6ರಷ್ಟು ಕುಸಿದಿದೆ.  ಜನರಲ್ ಮೋಟಾರ್ಸ್ ಇಂಡಿಯಾ ಮೇ ತಿಂಗಳಲ್ಲಿ 8,329 ವಾಹನಗಳನ್ನು ಮಾರಾಟ ಮಾಡಿದ್ದು, ಶೇ1.3ರಷ್ಟು ಮಾತ್ರ ಪ್ರಗತಿ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry