ತೈಲ ಸೋರಿಕೆ: ಜಲಚರಗಳಿಗೆ ಹಾನಿ

7

ತೈಲ ಸೋರಿಕೆ: ಜಲಚರಗಳಿಗೆ ಹಾನಿ

Published:
Updated:
ತೈಲ ಸೋರಿಕೆ: ಜಲಚರಗಳಿಗೆ ಹಾನಿ

ಭದ್ರಾವತಿ: ಕಾರ್ಖಾನೆ ಟ್ಯಾಂಕರ್‌ನಲ್ಲಿ ಶೇಖರಿಸಿದ್ದ ಸಾಬೂನು ತೈಲ ಸೋರಿಕೆ ಕಾರಣ ಭದ್ರಾ ಬಲದಂಡೆ ನಾಲೆಯ ಉಪ ಕಾಲುವೆಗಳಲ್ಲಿನ ಜಲಚರಗಳು ಹಾನಿಗೆ ತುತ್ತಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.ಇಲ್ಲಿನ ಕಬಳೀಕಟ್ಟೆ ಬಳಿ ಇರುವ ~ಆಲಂ~ ಕಾರ್ಖಾನೆ ಟ್ಯಾಂಕರ್‌ನಲ್ಲಿ ಸಾಬೂನು ತಯಾರಿಕೆಗೆ ಬಳಸಲು ವಿವಿಧ ರಾಸಾಯನಿಕ ವಸ್ತುಗಳಿಂದ ಸಿದ್ಧಪಡಿಸಿದ್ದ ಸುಮಾರು 20ಟನ್‌ನಷ್ಟು `ಸೆಪ್ಟಂ~ ಎಂಬ ತೈಲ ಸೋರಿಕೆ ಕಾರಣ ಈ ಅವಘಡ ನಡೆದಿದೆ.ತೈಲ ಸೋರಿಕೆಯಾಗಿ ಪಕ್ಕದಲ್ಲಿ ಹರಿಯುತ್ತಿದ್ದ ನಾಲೆಗೆ ಸೇರಿದ ಪರಿಣಾಮ ನೀರಿನ ರಭಸಕ್ಕೆ ಅದು ದೊಡ್ಡ ಆಕಾರದ ನೊರೆಯ ಶಿಖರವನ್ನು ಸೃಷ್ಟಿ ಮಾಡಿತ್ತು. ತೈಲ ಸೋರಿಕೆ ಕಾರಣ ನಾಲೆಯ ಉಪ ಕಾಲುವೆಯಲ್ಲಿನ ಮೀನು, ಹಾವು ಹಾಗೂ ಇತರೆ ಜಲಚರಗಳು ಮೃತಪಟ್ಟಿವೆ.ನಾಲಾ ಭಾಗದ ಜನರಿಗೆ ಎರಡು ದಿನಗಳ ಮಟ್ಟಿಗೆ ನಾಲೆಯ ನೀರನ್ನು ಉಪಯೋಗ ಮಾಡದಂತೆ ತಾಲ್ಲೂಕು ಆಡಳಿತ ಸೂಚಿಸಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್ ಬಿ. ಅಭಿಜಿನ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು  ಸಂಬಂಧಿಸಿದ ಕಾರ್ಖಾನೆ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಪರಿಸರ ಇಲಾಖೆ ಹಾಗೂ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry