ತೈಲ ಸೋರಿಕೆ ಪತ್ತೆ

7

ತೈಲ ಸೋರಿಕೆ ಪತ್ತೆ

Published:
Updated:

ನವದೆಹಲಿ (ಪಿಟಿಐ): ಮುಂಬೈ ಕರಾವಳಿಯಿಂದ 80 ಕಿ.ಮೀ ದೂರದ ಸಮುದ್ರದಲ್ಲಿ ಕಚ್ಚಾ ತೈಲದ ಪೈಪ್‌ಲೈನ್‌ನಿಂದ ಸುಮಾರು ಒಂದು ಮೈಲು ಅಳತೆ ಭಾಗದಲ್ಲಿ ತೈಲ ಸೋರಿಕೆಯಾಗಿರುವುದು ಪತ್ತೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಶುಕ್ರವಾರ ಹೇಳಿದೆ.

‘ಬಾಂಬೆ ಹೈ ತೈಲಾಗಾರಕ್ಕೆ ಕಚ್ಚಾ ತೈಲ ಸಾಗಿಸುವ ಒಎನ್‌ಜಿಸಿಯ ಮುಂಬೈ-ಉರಾನ್ ಟ್ರಂಕ್ ಪೈಪ್‌ಲೈನ್‌ನಲ್ಲಿ ತೈಲ ಸೋರಿಕೆಯಾಗುತ್ತಿರುವುದು ಶುಕ್ರವಾರ ಬೆಳಿಗ್ಗೆ 8.45 ಸುಮಾರಿಗೆ ಪತ್ತೆಯಾಯಿತು’ ಎಂದು ನಿಗಮ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಾಂಬೆ ಹೈ, ಬಸ್ಸೀನ್ ತೈಲಾಗಾರಗಳನ್ನು ತಕ್ಷಣ ಸ್ಥಗಿತಗೊಳಿಸಲಾಗಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry