ತೈವಾನ್: ಲಂಚ ನೀಡಿದರೆ ಶಿಕ್ಷೆ

ಬುಧವಾರ, ಜೂಲೈ 24, 2019
27 °C

ತೈವಾನ್: ಲಂಚ ನೀಡಿದರೆ ಶಿಕ್ಷೆ

Published:
Updated:

ತೈಪೆ (ಎಎಫ್‌ಪಿ): ಉನ್ನತ ಮಟ್ಟದ ಲಂಚ ಹಗರಣಗಳು ಬೆಳಕಿಗೆ ಬಂದ ನಂತರ ಮೊದಲ ಬಾರಿಗೆ ಟೈವಾನ್‌ನಲ್ಲಿ ಲಂಚ ನೀಡುವುದನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಮಂಗಳವಾರ ಸಂಸತ್‌ನಲ್ಲಿ ಮಸೂದೆಯೊಂದನ್ನು ಅಂಗೀಕರಿಸಿದ್ದು ಇದರನ್ವಯ ವ್ಯಕ್ತಿಗಳು ಹಣ, ಪದಾರ್ಥ ಅಥವಾ  ಲೈಂಗಿಕ ಸೇವೆಯಂತಹದನ್ನು ಸರ್ಕಾರಿ ನೌಕರರಿಗೆ ನೀಡುವುದನ್ನು  ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ಲಂಚ ಪಡೆದವರಿಗೆ ಶಿಕ್ಷೆ ನೀಡಲಾಗುತ್ತಿತ್ತು.ಲಂಚ ನೀಡಿದರೆ ಗರಿಷ್ಠ ಮೂರು ವರ್ಷ ಜೈಲು ವಾಸ ಮತ್ತು 5ಲಕ್ಷ ಟೈವಾನ್ ಡಾಲರ್(17,200 ಅಮೆರಿಕ ಡಾಲರ್)ಗಳ ದಂಡ ವಿಧಿಸಲಾಗುತ್ತದೆ ಎಂದು ನ್ಯಾಯಾಂಗ ಸಚಿವಾಲಯ ತಿಳಿಸಿದೆ.`ಬಹಳ ಕಾಲ ಜಾರಿಯಲ್ಲಿದ್ದ `ಕೆಂಪು ಲಕೋಟೆ ಸಂಸ್ಕೃತಿ~ ಯನ್ನು ನೂತನ ಕಾನೂನಿನಿಂದ ನಿರ್ಮೂಲನ ಮಾಡಿದಂತಾಗುತ್ತದೆ. ಹಣವನ್ನು ಲಕೋಟೆಯಲ್ಲಿ ಹಾಕಿಕೊಡುವುದನ್ನು ಇಲ್ಲಿ ಕೆಂಪು ಲಕೋಟೆ ಸಂಸ್ಕೃತಿ ಎಂದು ಹೇಳಲಾಗುತ್ತದೆ.  ಲಂಚ ಪಡೆದವರಿಗೆ ಶಿಕ್ಷೆಯಾಗುತ್ತಿದ್ದು ಅದನ್ನು ನೀಡಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದುದ್ದನ್ನು ಸರಿಪಡಿಸಿದಂತಾಗುತ್ತದೆ~ ಎಂದು ನ್ಯಾಯಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry