ತೊಗರಿ:ನಾಳೆ ಗುಲ್ಬರ್ಗ ಬಂದ್

7

ತೊಗರಿ:ನಾಳೆ ಗುಲ್ಬರ್ಗ ಬಂದ್

Published:
Updated:

ಗುಲ್ಬರ್ಗ: ಕೇಂದ್ರ ಸರ್ಕಾರವು ತೊಗರಿ ಆಮದಿನ ಮೇಲೆ ಸುಂಕ ವಿಧಿಸುತ್ತಿಲ್ಲ. ಬದಲಾಗಿ ಆಮದುದಾರರಿಗೆ ಶೇ 15 ಪ್ರೋತ್ಸಾಹಧನ ನೀಡುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ತೊಗರಿ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರವು ಕೂಡಲೇ ಶೇ 30 ಆಮದು ಸುಂಕ ವಿಧಿಸಬೇಕು ಹಾಗೂ ತೊಗರಿಗೆ ಕನಿಷ್ಠ ಬೆಂಬಲ ಬೆಲೆ ₨6,450 ನೀಡಬೇಕು ಎಂದು ಒತ್ತಾಯಿಸಿ ಜ.9ರಂದು ಗುಲ್ಬರ್ಗ ಬಂದ್‌ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮಂಗಳವಾರ ತಿಳಿಸಿದರು.

ರಾಜ್ಯ ಸರ್ಕಾರವು ತೊಗರಿಗೆ ₨ 5 ಸಾವಿರ ಬೆಂಬಲ ಬೆಲೆ ಘೋಷಿಸಿ ಖರೀದಿ ಆರಂಭಿಸಿದೆ. ಆದರೆ ಸಾಕಷ್ಟು ಅನುದಾನ ಇಲ್ಲದ ಕಾರಣ ಎಲ್ಲರ ರೈತರ ತೊಗರಿ ಖರೀದಿ ನಡೆಯುತ್ತಿಲ್ಲ. ಇನ್ನೊಂದೆಡೆ ಸಮೀಪದ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಕ್ವಿಂಟಲ್‌ಗೆ ₨4,200ಗೆ ತೊಗರಿ ಖರೀದಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಗುಲ್ಬರ್ಗದಲ್ಲೂ  ₨3,800 ರಿಂದ ₨4,400 ದರದ ಮಧ್ಯೆಯೇ ವ್ಯಾಪಾರ ನಡೆಯುತ್ತಿದೆ.ರೈತರಿಗೆ ರಾಜ್ಯ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ  ₨5 ಸಾವಿರವೂ ಸಿಗುತ್ತಿಲ್ಲ.ರೈತರು ಇನ್ನಷ್ಟು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಈ ಭಾಗದಿಂದ ಕೇಂದ್ರವನ್ನು   ಪ್ರತಿನಿಧಿಸುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಧರ್ಮಸಿಂಗ್‌ ಅವರು ಕೇಂದ್ರ ಕೃಷಿ ಹಾಗೂ ವಿತ್ತ ಸಚಿವರ ಮೇಲೆ ಒತ್ತಡ ಹೇರಿ ತೊಗರಿ ಆಮದಿನ ಮೇಲೆ ಕನಿಷ್ಠ ಶೇ 30 ಸುಂಕ ವಿಧಿಸಬೇಕು. ಆಮದಿಗೆ ನೀಡಿರುವ ಶೇ 15 ಪ್ರೋತ್ಸಾಹ ಧನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry