ತೊಗರಿ, ಕಬ್ಬು ಬೆಳೆಗಾರರ ಪ್ರತಿಭಟನೆ

7

ತೊಗರಿ, ಕಬ್ಬು ಬೆಳೆಗಾರರ ಪ್ರತಿಭಟನೆ

Published:
Updated:

ವಿಜಾಪುರ: ಪ್ರತಿ ಕ್ವಿಂಟಲ್‌ ತೊಗರಿಗೆ ರೂ. 6,450 ಬೆಲೆ ನಿಗದಿ ಮಾಡಬೇಕು. ಪ್ರತಿ ಟನ್‌ ಕಬ್ಬಿಗೆ ರೂ. 2,650 ದರವನ್ನು ಮೊದಲ ಕಂತಿನಲ್ಲಿಯೇ ನೀಡಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ರೈತ ಸಂಘಟನೆಗಳ ನೇತೃತ್ವದಲ್ಲಿ ಕಬ್ಬು ಮತ್ತು ತೊಗರಿ ಬೆಳೆಗಾರರು ಗುರು ವಾರ ಇಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರ ವಣಿಗೆಯಲ್ಲಿ ತೆರಳಿ, ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ಅವರಿಗೆ ಮನವಿ ಸಲ್ಲಿಸಿದರು.‘ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ ತೊಗರಿಯನ್ನು ರೂ. 5,000 ದರದಲ್ಲಿ ಒಬ್ಬ ರೈತರಿಂದ ಕೇವಲ 20 ಕ್ವಿಂಟಲ್‌ ಖರೀದಿಸುತ್ತಿದೆ. ಗುಣಮಟ್ಟದ ಕಟ್ಟಳೆ ವಿಧಿಸಿರುವುದರಿಂದ ಇದರ ಪ್ರಯೋ ಜನ ರೈತರಿಗೆ ತಲುಪುತ್ತಿಲ್ಲ. ಈ ನಿಬಂಧ ನೆಗಳನ್ನು ತೆಗೆದುಹಾಕಿ ರೈತರು ಬೆಳೆದ ಎಲ್ಲ ತೊಗರಿಯನ್ನು ರೂ. 6,450 ದರದಲ್ಲಿ ಖರೀದಿಸಬೇಕು’ ಎಂದು ತೊಗರಿ ಮತ್ತು ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡ ರಾದ ಪಂಚಪ್ಪ ಕಲಬುರ್ಗಿ, ಎಸ್‌.ವಿ. ಪಾಟೀಲ ಆಗ್ರಹಿಸಿದರು.‘ತೊಗರಿ ಖರೀದಿಗಾಗಿ ತೊಗರಿ ಮಂಡಳಿಗೆ ರೂ. 1,000 ಕೋಟಿ ಕೊಡ ಬೇಕು. ತೊಗರಿ ಸೇರಿದಂತೆ ಆಹಾರ ಧಾನ್ಯಗಳ ಆಮದು ನಿಲ್ಲಿಸಬೇಕು’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶಿ ಕಲಾದಗಿ ಹೇಳಿದರು.‘ಕಬ್ಬಿಗೆ ರೂ. 2,500 ದರ ನಿಗದಿ ಮಾಡಿದ್ದು, ಸರ್ಕಾರ ರೂ. 150 ಪ್ರೋತ್ಸಾಹ ಧನ ನೀಡುತ್ತಿದೆ. ಎಲ್ಲ ಸಕ್ಕರೆ ಕಾರ್ಖಾನೆಯವರು ಮೊದಲ ಕಂತಿ ನಲ್ಲಿಯೇ ಈ ಎಲ್ಲ ಹಣವನ್ನು ಪಾವತಿ ಸಬೇಕು’ ಎಂದು ನಾರಾಯಣ ಗಡದನ್ನ ವರ, ಚಂದ್ರಗೌಡ ಪಾಟೀಲ, ಅಣ್ಣಾ ರಾಯ ಈಳಗೇರ ಒತ್ತಾಯಿಸಿದರು.ಜುಬೇದಾ ಹಣಗಿ, ಸುರೇಖಾ ರಜಪೂತ, ಖಾಜಾಸಾಬ ಕೊಲ್ಹಾರ, ಡಿ.ಎಚ್‌. ಮುಲ್ಲಾ ಇತರರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry