ತೊಗರಿ ಖರೀದಿ ಆರಂಭ: ಹೋರಾಟ ಹಿಂದಕ್ಕೆ

7

ತೊಗರಿ ಖರೀದಿ ಆರಂಭ: ಹೋರಾಟ ಹಿಂದಕ್ಕೆ

Published:
Updated:

ಯಾದಗಿರಿ: ಗುರುಮಠಕಲ್‌ನಲ್ಲಿ ಶನಿವಾರ ರೈತ ಕೃಷಿ –ಕಾರ್ಮಿಕ ಸಂಘಟನೆಯು ಪ್ರತಿಭಟನೆ ನಡೆಸಿದ ನಂತರ ಶನಿವಾರದಿಂದಲೇ ಗುರುಮಠಕಲ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ತೊಗರಿ ಖರೀದಿ ಆರಂಭಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜ.7 ರಂದು ಯಾದಗಿರಿ ಎಪಿಎಂಸಿ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸಂಘಟನೆ ತಿಳಿಸಿದೆ.ತೊಗರಿ ಮಂಡಳಿಯಲ್ಲಿ ಸಾಕಷ್ಟು ಹಣ ಇರುವುದಾಗಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಮಿಶ್ರಾ, ಆರ್.ಕೆ.ಎಸ್. ಮುಖಂಡರಿಗೆ ತಿಳಿಸಿದ್ದಾರೆ. ಸರ್ಕಾರವೂ ಫೆಬ್ರುವರಿ ಕೊನೆಯವರೆಗೆ ತೊಗರಿ ಖರೀದಿ ಮಾಡುವುದಾಗಿ ಘೋಷಿಸಿದೆ. ಅಲ್ಲಿಯವರೆಗೆ ರೈತರು ತಮ್ಮ ತೊಗರಿಯನ್ನು ಮಾರಾಟ ಮಾಡಲು ಅವಕಾಶವಿದೆ.ಈ ಅವಧಿಯ ಒಳಗಾಗಿ ಮಾರಾಟ ಮುಗಿಯದಿದ್ದರೆ, ಮತ್ತೇ ಖರೀದಿಯ ದಿನಗಳನ್ನು ಹೆಚ್ಚಿಸಲು ಸರ್ಕಾರವನ್ನು ಕೋರಲಾಗುವುದು. ಹಣ ಮುಗಿದಿದೆ ಎಂದು ಖರೀದಿ ಕೇಂದ್ರವನ್ನು ಅರ್ಧಕ್ಕೆ ಮುಚ್ಚಿದರೆ, ಅದರ ವಿರುದ್ಧವೂ ಹೋರಾಟ ಮಾಡಲು ರೈತರು ಸಜ್ಜಾಗಿರಬೇಕು. ಯಾವುದೇ ತೊಂದರೆಗಳು ಕಂಡರೆ ಆರ್.ಕೆ.ಎಸ್. ಮುಖಂಡರನ್ನು (-9448814045, -9972607033) ಸಂಪರ್ಕಿಸಬೇಕು ಎಂದು ಸಂಘಟನೆ ಅಧ್ಯಕ್ಷ ಶರಣಗೌಡ ಗೂಗಲ್‌, ಕಾರ್ಯದರ್ಶಿ ವೆಂಕಟರಡ್ಡಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry