ತೊಗರಿ ಖರೀದಿ ಕೇಂದ್ರ ಆರಂಭ

7

ತೊಗರಿ ಖರೀದಿ ಕೇಂದ್ರ ಆರಂಭ

Published:
Updated:

ಯಾದಗಿರಿ:  ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳ ಸೂಚನೆಯಂತೆ ಕೇಂದ್ರ ಸರ್ಕಾರದಿಂದ ತೊಗರಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.ರೈತರು ಬೆಳೆದ ತೊಗರಿಯನ್ನು ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ರೂ. 3 ಸಾವಿರ ಹಾಗೂ ಪ್ರೋತ್ಸಾಹ ಧನ ರೂ.500 ಗಳಂತೆ ದರ ನೀಡಲಾಗುತ್ತಿದೆ. ಜನವರಿ 1 ರಿಂದ ಫೆಬ್ರವರಿ 28 ರವರೆಗೆ ಮಾತ್ರ ತೊಗರಿ ಖರೀದಿ ನಡೆಯಲಿದೆ.ಆಸಕ್ತ ರೈತರು ಯಾದಗಿರಿಯ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯಲ್ಲಿ ಸಿದ್ಧಲಿಂಗರೆಡ್ಡಿ (ಮೊ.ಸಮ. 9741091777), ಶಹಾಪುರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯಲ್ಲಿ ತಮ್ಮಣ್ಣಗೌಡ (ಮೊ.ಸಂ. 9742240206),  ಸುರಪುರ ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯಲ್ಲಿ ದೇವಪ್ಪ (ಮೊ.ಸಂ. 9741680043) ಅವರನ್ನು ಸಂಪರ್ಕಿಸಬಹುದಾಗಿದೆ.ರೈತರ ಹಿತದೃಷ್ಟಿಯಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಖರೀದಿ ಕೇಂದ್ರಗಳಿಗೆ ತೊಗರಿ ತರುವ ರೈತರು ತಮ್ಮ ತೊಗರಿಯನ್ನು ಸ್ವಚ್ಛ ಮಾಡಿ ಎಫ್‌ಎಕ್ಯೂ ಗುಣಮಟ್ಟ ಹಾಗೂ ತೇವಾಂಶ ಶೇ. 12 ರೊಳಗೆ ಇರುವ ಗುಣಮಟ್ಟದ ತೊಗರಿಯನ್ನು ಮಾರಾಟ ಮಾಡಬಹುದು. ಮಾರಾಟಕ್ಕೆ ಬರುವ ರೈತರು ಪಹಣಿ, ಸಂಬಂಧಿಸಿದ ಗ್ರಾಮ ಲೆಕ್ಕಿಗರಿಂದ ತೊಗರಿ ಬೆಳೆದ ಬಗ್ಗೆ ದೃಢೀಕರಣ ಪತ್ರವನ್ನು ತೆಗೆದುಕೊಂಡು ಬರಬೇಕು. ದಿನದ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ ರೂ. 3 ಸಾವಿರಕ್ಕಿಂತಕಡಿಮೆ ಇದ್ದಲ್ಲಿ ಈ ಕೇಂದ್ರಗಳಲ್ಲಿ ತೊಗರಿ ಖರೀದಿ ಮಾಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry