ಶುಕ್ರವಾರ, ನವೆಂಬರ್ 22, 2019
26 °C
ಹನುಮ ಜಯಂತಿ ಸಂಭ್ರಮ

ತೊಟ್ಟಿಲಲ್ಲಿ ಬಾಲಹನುಮ

Published:
Updated:

ಕೆರೂರ: ಸ್ಥಳೀಯ ನೆಹರುನಗರದ ಮಾರುತೇಶ್ವರ ಮಂದಿರಲ್ಲಿ ಗುರುವಾರ ಹನುಮ ಜಯಂತಿ ನಿಮಿತ್ತ  ಸುಮಂಗಲೆಯರು ಬಾಲ ಹನುಮನನ್ನು ಶೃಂಗರಿಸಿದ ತೊಟ್ಟಿಲಿನ್ಲ್ಲಲಿ ಪವಡಿಸಲು ಹಾಕಿ, ಜೋಗುಳ ಹಾಡುತ್ತಾ ಸಂಭ್ರಮದಿಂದ ಜಯಂತಿ ಆಚರಿಸಿದರು.ಹನುಮನಿಗೆ ಪದ್ಧತಿಯಂತೆ ನಾಮಕರಣ, ಇತರೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಮಂಜುಳಾ ಕಠಾರಿ, ಗೀತಾ ಹಣಗಿ, ರುಕ್ಮಿಣಿ, ಗಡೇದ, ಸಾವಿತ್ರಮ್ಮ ಭಾವಿಕಟ್ಟಿ, ರೇಣವ್ವ ಹಳಕಟ್ಟಿ, ಕಂಠಿ, ನೇಮದಿ, ಲಕ್ಷ್ಮೀ ಗಿಡ್ನಂದಿ, ಸಂಕಮ್ಮ ರಾಮದುರ್ಗ, ಮೇಘಾ ಗದ್ದನಕೇರಿ, ಕಂಠಿ ಮುಂತಾದವರು ಭಾಗವಹಿಸಿದ್ದರು.ಪೊಲೀಸ್ ಕಾಲೊನಿಯಲ್ಲಿ: ಇಲ್ಲಿನ ಪೊಲೀಸ್ ವಸತಿ  ಕಾಲೊನಿಯಲ್ಲಿ ಪ್ರತಿ ವರ್ಷದಂತೆ ಈ ಸಲವೂ ಹನುಮ ಜಯಂತಿಯನ್ನು ಸಡಗರದಿಂದ ಆಚರಿಸಿದರು. ಬೆಳಿಗ್ಗೆ ಹಲವು ಧಾರ್ಮಿಕ ಕಾರ್ಯಕ್ರಮ ಆಚರಣೆಯ ನಂತರ ಮಧ್ಯಾಹ್ನ ಭಕ್ತ ಸಮೂಹಕ್ಕೆ ಹನುಮ ಜಯಂತಿ  ಸಿಹಿ ಪ್ರಸಾದದ ಭೋಜನ ಏರ್ಪಡಿಸಿದ್ದರು.ಸಮೀಪದ ಮತ್ತಿಕಟ್ಟಿ, ಅಗಸರಕೊಪ್ಪ, ಜಮ್ಮನಕಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಹನಮ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಕೆ ಇ ಬಿ ಕಾಲೊನಿ, ಸರ್ವೇಶ್ವರ ಕೊಳ್ಳ ಹಾಗೂ ವಿವಿಧ ಬಡಾವಣೆಗಳ ದೇಗುಲಗಳಲ್ಲಿ ವಿಧಿ ವಿಧಾನದ ಪ್ರಕಾರ ಪೂಜಾ ಆಚರಣೆಗಳು ನಡೆದವು. ನಂತರ ಜಯಂತಿ ನಿಮಿತ್ತ ಎಲ್ಲೆಡೆ ನೂರಾರು ಮುತ್ತೈದೆ ಮಹಿಳೆಯರು ಶ್ರದ್ಧೆ, ಭಕ್ತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)