ಶುಕ್ರವಾರ, ನವೆಂಬರ್ 15, 2019
23 °C

ತೊರವಿ ಲಕ್ಕಮ್ಮ ಜಾತ್ರೆ ಇಂದಿನಿಂದ

Published:
Updated:

ವಿಜಾಪುರ: ತೊರವಿಯ ಲಕ್ಕಮ್ಮ ದೇವಿ ಜಾತ್ರೆ ಅಂಗವಾಗಿ ಇದೇ 22ರಂದು ಬೆಳಿಗ್ಗೆ ಪಲ್ಲಕ್ಕಿಗಳ ಆಗಮನ, ರಾತ್ರಿ ಡೊಳ್ಳಿನ ಪದ ಕಾರ್ಯಕ್ರಮ ಜರುಗಲಿದೆ.24ರಂದು ರಾತ್ರಿ 10.30ಕ್ಕೆ ನಾಟಕ ಪ್ರದರ್ಶನ, 25ರಂದು ಬೆಳಿಗ್ಗೆ 8ಕ್ಕೆ ನಂದಿಕೋಲು ಮೆರವಣಿಗೆ ಹಾಗೂ ರಾತ್ರಿ ಶ್ರೀಕೃಷ್ಣ ಪಾರಿಜಾತ, 26ರಂದು ಬೆಳಿಗ್ಗೆ 11ಕ್ಕೆ ದೇವಿಗೆ ಗ್ರಾಮಸ್ಥರಿಂದ ಅಂಬಲಿ ಬಾನ ಸೇವೆ, ಸಂಜೆ 4ಕ್ಕೆ ಕುಸ್ತಿ ಸ್ಪರ್ಧೆ, 6ಕ್ಕೆ ರಂಗ ತೆಗೆಯುವ ಕಾರ್ಯಕ್ರಮ, ರಾತ್ರಿ 12ಕ್ಕೆ ದೇವಿಯನ್ನು ಕರೆತರುವ ಕಾರ್ಯಕ್ರಮ. 27ರಂದು ಬೆಳಿಗ್ಗೆ 8ಕ್ಕೆ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದೆ.ಇದೇ 27ರ ವರೆಗೆ ನಿತ್ಯ ಸಂಜೆ ಅನ್ನ ಪ್ರಸಾದ ವಿತರಣೆ ಹಾಗೂ ರಾತ್ರಿ ಡೊಳ್ಳಿನ ಪದ ಕಾರ್ಯಕ್ರಮ ಜರುಗಲಿವೆ ಎಂದು ಬಸು ಹೂಗಾರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)