ತೊಲಗಲಿ ದುರಾಚಾರ

7

ತೊಲಗಲಿ ದುರಾಚಾರ

Published:
Updated:

ಎಂಜಲೆಲೆಗಳ ಮೇಲೆ ಉರುಳು ಸೇವೆ

ನಾಚಿಕೆಯಲಿ ನಾಗರಿಕರ ತಲೆ ತಗ್ಗಿಸಿವೆ

ಆದರೇನಂತೆ ಡಾಕ್ಟರು ಇಂಜಿನಿಯರು

ಕೊಡುವರಿದಕೆ ಮನಶ್ಶಾಂತಿಯ ಹೆಸರು

ಇದ್ದರೇನಂತೆ ಎದುರಿಗೇ ಪೊಲೀಸರು

ಎಲ್ಲರೂ  ಮೂಢ ನಂಬಿಕೆಗಳ ದಾಸರುಮನುಜ ಚಂದ್ರನ ಮೇಲೆ ಇಳಿದರೇನಂತೆ

ನಡೆಯುತಲೇ ಇದೆ ಅನಾಗರಿಕತೆಯ ಸಂತೆ  

ಮೈಗೆ ಮೆತ್ತಿಕೊಂಡರೆ ಊಟದ ಮುಸುರೆ                   

ತೊಳೆಯುವುದೇ ಮನದೊಳಗಿನ ಕೆಸರು

ಓ ದೇವರೇ ! ನೀನೇ ತೊಲಗಿಸು ಅಜ್ಞಾನ

ಮುಂದಿನ ಪೀಳಿಗೆಗೆ ಕರುಣಿಸು ಸುಜ್ಞಾನ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry