ಮಂಗಳವಾರ, ನವೆಂಬರ್ 19, 2019
25 °C

ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ಚಾಲನೆ

Published:
Updated:
ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಗದಗ: `ತೊಂದರೆ ನೀಡುವ ಅಧಿಕಾರಗಳ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು' ಎಂದು ಉಪಲೋಕಾಯುಕ್ತ ಸುಭಾಸ ಆದಿ ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಬುಧವಾರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಎಲ್ಲರಿಗೂ ಒಂದೇ ಕಾನೂನು.ಸಮಾಜದ ವಿರುದ್ಧ ಅಧಿಕಾರಿಗಳು ನಡೆದರೆ ಧರ್ಮದ ವಿರುದ್ಧ ನಡೆದಂತೆ. ಅಧಿಕಾರಿಗಳಿಂದ ಕಾನೂನು ರೀತಿಯ ಸಮಸ್ಯೆಗಳಿದ್ದರೆ ಅದನ್ನು ನನ್ನ ಗಮನಕ್ಕೆ ತರಬೇಕು. ಕಾನೂನು ಚೌಕಟ್ಟಿನಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು' ಎಂದರು.ದಶಕಗಳ ಹಿಂದೆ ಸರ್ಕಾರದ ಅನು ದಾನ ಇಲ್ಲದೆ ಮಠಗಳು ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಬಡ ಮಕ್ಕಳಿಗೆ ಊಚಿತ ಊಟ ಮತ್ತು ವಸತಿ ಕಲ್ಪಿಸಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.ಲಿಂಗಾಯತ ಪುಣ್ಯಪುರುಷರ ಸಾಹಿತ್ಯ ರತ್ನಮಾಲೆ ಗ್ರಂಥಗಳ ಬಿಡುಗಡೆ ಮಾಡಲಾಯಿತು. ಡಾ. ಬಿ.ಎಸ್. ಗವಿಮಠ ರಚಿಸಿದ ಚಿಕ್ಕೋಡಿ ಶಿವಲಿಂಗಸ್ವಾಮಿಗಳು, ಡಾ. ಪಿ.ಜಿ. ಕೆಂಪಣ್ಣನವರ ರಚಿಸಿದ ಬಸವ ಪ್ರಭು ದೇಸಾಯಿ, ಶಿರೀಷ್ ಜೋಶಿ ರಚಿಸಿದ ಗಡಹಿಂಗ್ಲಜ ಚಂದ್ರಮ್ಮತಾಯಿಗಳು, ಡಾ. ಬಸವರಾಜ ಜಗಜಂಪಿ ರಚಿಸಿದ ಎಸ್.ಡಿ. ಇಂಚಲ ಮತ್ತು ಪ್ರಕಾಶ ಗಿರಿಮಲ್ಲನವರ ರಚಿಸಿದ ಹುಕ್ಕೇರಿ ಬಾಳಪ್ಪನವರು ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.

ಸಾಹಿತಿ ಬೆಳಗಾವಿ ಡಾ. ಬಸವರಾಜ ಜಗಜಂಪಿ  ಗ್ರಂಥಗಳ ಪರಿಚಯ ಮಾಡಿದರು. ಗ್ರಂಥ ದಾನಿಗಳಾದ ಡಾ. ಎಸ್.ಡಿ. ಪ್ಯಾಟಿ, ಜಿ. ಎಸ್.ಮಾಳವಾಡ, ರತ್ನಕ್ಕ ಪಾಟೀಲ, ಗೌರಮ್ಮ ಹಂಟೂಳ, ವೀರಯ್ಯ ವಿರಕ್ತಮಠ ಹಾಜರಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್. ತಿಪ್ಪಣ್ಣ, ಹಿಂದೂ ಮುಸ್ಲಿಂ ಭಾವೈಕ್ಯ ನಿಧಿ ಗೊಳಸಂಗಿಯ ಕಾಶೀಂಸಾಬ್ ವಿಜಾಪುರ, ಡಾ. ಸಿದ್ಧನಗೌಡ ಪಾಟೀಲ, ಡಾ. ಸರಜೂ ಕಾಟ್ಕರ, ಗ್ರಂಥಕರ್ತರಾದ ಪ್ರಕಾಶ ಗಿರಿಮಲ್ಲನವರ, ಶಿರೀಷ ಜೋಶಿ, ಡಾ. ಪಿ.ಜಿ. ಕೆಂಪಣ್ಣನವರ, ಎಂ.ಎಸ್. ಇಂಚಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)