ತೋಕ್ ನಮ್ಮೆ- ಗನ್ ಕಾರ್ನಿವಲ್

7

ತೋಕ್ ನಮ್ಮೆ- ಗನ್ ಕಾರ್ನಿವಲ್

Published:
Updated:

ನಾಪೋಕ್ಲು:  ಕೊಡವ ಪರಂಪರೆಯ ಲಾಂಛನವಾಗಿರುವ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಬದುಕಿನ ಸಂಕೇತ ವಾಗಿರುವ ಕೋವಿಯ ಮಹತ್ವ ವನ್ನು ತಿಳಿಸುವ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಳಕೇರಿಯ ಕಾವೇರಿ ಎಸ್ಟೇಟಿನಲ್ಲಿ ಮಂಗಳವಾರ `ತೋಕ್ ನಮ್ಮೆ- ಗನ್ ಕಾರ್ನಿವಲ್' ನಡೆಯಿತು.ಬಂದೂಕುಗಳಿಗೆ ಪೂಜೆ ಸಲ್ಲಿಸಿ ಮಾತ ನಾಡಿದ ಸಿಎನ್‌ಸಿ ಅಧ್ಯಕ್ಷ ನಂದಿನೆರ ವಂಡ ಯು. ನಾಚಪ್ಪ, ಕೊಡವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಲಾಂಛನ ವಾದ ಕೋವಿಯನ್ನು ಪಡೆಯುವುದು ಮಾತ್ರವಲ್ಲ ಶಾಸನಬದ್ದ ಹಕ್ಕಿನ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.ಇದಕ್ಕೂ ಮುನ್ನ ನಾಪೋಕ್ಲುವಿನ ಮಾರುಕಟ್ಟೆಯಿಂದ ಸಾಂಸ್ಕೃತಿಕ ಮೆರವ ಣಿಗೆ ನಡೆಸಲಾಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು ನಾಚಪ್ಪ ಗಾಳಿಯಲ್ಲಿ ಗಂಡು ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಬಳಿಕ ಕೊಳಕೇರಿಯ ಕಾವೇರಿ ಎಸ್ಟೇಟಿನಲ್ಲಿ ಕೊಡವರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ನಾಪೋಕ್ಲು ನೆಲಜಿ, ಕಕ್ಕಬ್ಬೆ ಮತ್ತು ಕೊಳಕೇರಿಯ ಕೊಡವ ಸಮುದಾಯದವರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.ಕಲಿಯಂಡ ಪ್ರಕಾಶ್, ಅಪ್ಪಚ್ಚೀರ ರಮ್ಮಿನಾಣಯ್ಯ, ಪುಲ್ಲೇರ ಕಾರ್ಯಪ್ಪ, ಜಮ್ಮಡ ನಂದ, ಜಮ್ಮಡ ಅಯ್ಯಣ್ಣ, ಅಜ್ಜನಿಕಂಡ ಮಹೇಶ್ ನಾಚಯ್ಯ, ಮೂವೇರ ಧರಣಿ ಗಣಪತಿ, ಅರುಣ್ ಬೇಬ, ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry