ಗುರುವಾರ , ಮೇ 19, 2022
20 °C

ತೋಟಗಾರಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಮತ್ತು ಇತರ ಅಧಿಕಾರಿಗಳು ಸೇರಿ ಬಡ ರೈತರಿಗೆ ಸಿಗಬೇಕಾದ ಧನಸಹಾಯ ಸೇರಿದಂತೆ ಇತರ ಸೌಲಭ್ಯಗಳನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ನೇತೃತ್ವದಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.ಬಡ ರೈತರಿಗೆ ಸಿಗಬೇಕಾದ ಸರ್ಕಾರದ ಧನಸಹಾಯವನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ. ಔಷಧಿ, ಉಪಕರಣ  ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದರಿಂದ ತೋಟಗಾರಿಕಾ ಸಚಿವರಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಬಡ ರೈತರಿಗೆ ವಂಚಿಸುತ್ತಿರುವ ಇಂಥ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಕೆ.ಟಿ. ಕಲ್ಲೇಶ್, ಎಚ್.ಬಿ. ರುದ್ರೇಗೌಡ್ರು, ಕೆ.ಎನ್. ವೆಂಕಟೇಶ್, ಬಿ. ಕಲ್ಲೇಶ್, ಬಸವರಾಜ್, ಷೇರ್ ಅಲಿ, ಎಂ.ಎ. ಸಾದಿಕ್, ದಾದಾಪೀರ್, ವಿಜಯಕುಮಾರ್ ಇತರರು ಭಾಗವಹಿಸಿದ್ದರು.ವಿಶ್ವ ಮಹಿಳಾ ದಿನ

ದಾವಣಗೆರೆ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವತಿಯಿಂದ ಕುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕತೊಗಲೇರಿಯಲ್ಲಿ ಈಚೆಗೆ ವಿಶ್ವ ಮಹಿಳಾ ದಿನ ಆಚರಿಸಲಾಯಿತು.

ಮಹಿಳಾ ಸ್ವಸಹಾಯ ಸಂಘದ ಸಂಚಾಲಕಿ ಸುನಂದಮ್ಮ, ಜನ ಶಿಕ್ಷಣ ಸಂಸ್ಥೆಯ ತಾಲ್ಲೂಕು ಘಟಕದ ಸಂಯೋಜಕಿ ಪದ್ಮಮ್ಮ, ಯೋಜನಾಧಿಕಾರಿ ನಾಗಪ್ಪ, ಲಕ್ಷ್ಮೀ, ಪಾರ್ವತಮ್ಮ ಹಾಗೂ ದಾವಣಗೆರೆ ವಿವಿಯ ಉಪನ್ಯಾಸಕಿ ಡಿ.ಜಿ. ಸುನೀತಾ, ಸಮಾಜ ಕಾರ್ಯ ವಿಭಾಗದ ಶಿಕ್ಷಣಾರ್ಥಿಗಳಾದ ಬಿ.ಎಚ್. ವಿಜಯ್‌ಕುಮಾರ್, ಜ್ಯೋತಿ, ಮಂಜುನಾಥ್, ದೇವರಾಜ್, ನಾಗರಾಜ್, ಮಂಜಾನಾಯ್ಕ ಇದ್ದರು.ಇದೇ ಸಂದರ್ಭದಲ್ಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಲೆ ಮುಖ್ಯ ಶಿಕ್ಷಕ ಎ.ಆರ್. ಗೋಪಾಲ್ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.