ಬುಧವಾರ, ಏಪ್ರಿಲ್ 21, 2021
30 °C

ತೋಟಗಾರಿಕೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಕಲ್ಲಂಗಡಿ ಬೀಜಗಳ ವೈಫಲ್ಯದಿಂದ ಫಸಲು ದೊರೆಯದೆ ಹಾನಿಗೊಳಗಾಗಿರುವ ರೈತರಿಗೆ ಬೀಜ ಕಂಪನಿಯಿಂದ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ನೇತೃತ್ವವನ್ನು ವಹಿಸಿದ್ದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ, ತಾಲ್ಲೂಕಿನ ಚಿಕ್ಕಮೊರಬ ಗ್ರಾಮದ ರೈತ ಭೀಮಗೌಡ ಪಾಟೀಲ ಅವರು ತಮ್ಮ 7 ಎಕರೆ ಜಮೀನಿನಲ್ಲಿ ನಾಮಧಾರಿ ಕಂಪನಿಯ ಕಲ್ಲಂಗಡಿ ಬೀಜವನ್ನು ಬಿತ್ತನೆ ಮಾಡಿದ್ದರು. ಬೀಜಗಳನ್ನು ರಟ್ಟೀಹಳ್ಳಿ ವೈಭವ ಆಗ್ರೋ ಸೆಂಟರ್‌ನಿಂದ ಖರೀದಿಸ ಲಾಗಿತ್ತು. ಬೀಜ ಕಳಪೆಯಾಗಿರುವುದರಿಂದ ಫಲ ಬರುವ ಮೊದಲೇ ಬೆಳೆಗಳು ಒಣಗಿ ಸಂಪೂರ್ಣ ಹಾಳಾಗಿದ್ದು, ರೈತನಿಗೆ ರೂ.7 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಆರೋಪಿಸಿದರು.ಹಾನಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಬೀಜ ವಿತರಕರಲ್ಲಿ ಹಾಗೂ ತೋಟಗಾರಿಕೆ ಅಧಿಕಾರಿಗಳಲ್ಲಿ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಉಪಯೋಗವಾಗಿಲ್ಲ, ಆದ್ದರಿಂದ ರೈತನಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ಮಹೇಶ ಕೊಟ್ಟೂರ, ನಾಗಪ್ಪ ನೀರಲಗಿ, ರಿಜ್ವಾನ್‌ಸಾಬ್ ದೊಡ್ಡಮನಿ, ಪ್ರಭುಗೌಡ ಪ್ಯಾಟಿ, ಫಯಾಜ್‌ಸಾಬ್ ದೊಡ್ಡಮನಿ, ಶಂಕ್ರಗೌಡ ಮಕ್ಕಳ್ಳಿ, ಹೂವನಗೌಡ ಮಳವಳ್ಳಿ, ಕುರುವತ್ತೆಪ್ಪ ಕರೇಗೌಡ್ರ, ಚಂದ್ರಪ್ಪ ಸಣ್ಣಪ್ಪನವರ, ಪರಮೇಶಪ್ಪ ಮಡಿವಾಳರ, ಮರಡೆಪ್ಪ ಪೂಜಾರ, ಭೀಮನಗೌಡ ಪಾಟೀಲ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

ಸಂಜೆ 7.30ರವರೆಗೂ ಪ್ರತಿಭಟನೆ ಮುಂದುವರೆದಿತ್ತು. ಸಿಪಿಐ ಎಚ್.ಶೇಖರಪ್ಪ ಸ್ಥಳದಲ್ಲಿದ್ದು ಮಾತುಕತೆ ನಡೆಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.