ಶನಿವಾರ, ಸೆಪ್ಟೆಂಬರ್ 21, 2019
24 °C

ತೋಟಗಾರಿಕೆ: 14ಕ್ಕೆ ತಾಂತ್ರಿಕ ಕಾರ್ಯಾಗಾರ

Published:
Updated:

ಬೆಂಗಳೂರು: ಕರ್ನಾಟಕ ತೋಟಗಾರಿಕಾ ಅಧಿಕಾರಿಗಳ ಸಂಘವು ಸೆಪ್ಟೆಂಬರ್ 14 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮರೀಗೌಡ ಸ್ಮಾರಕ ಭವನದಲ್ಲಿ  ತೋಟಗಾರಿಕೆ ಕುರಿತ ತಾಂತ್ರಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ. ತೋಟಗಾರಿಕೆ ಒಂದು ಉದ್ಯಮವಾಗಿ ರೈತರು ಆಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲು ಹಾರ್ಟಿ ಡಾಕ್ಟರ್ಸ್‌ ತಾಂತ್ರಿಕ ಕೈಪಿಡಿ ಮತ್ತು  ವೆಬ್‌ಸೈಟ್‌ನ್ನು ಬಿಡುಗಡೆ ಮಾಡಲಿದೆ. ಇದರೊಂದಿಗೆ ರಕ್ತದಾನ ಶಿಬಿರವು ನಡೆಯಲಿದೆ.ಸುಮಾರು 350 ಪುಟಗಳನ್ನು ಹೊಂದಿರುವ ಕೈಪಿಡಿಯನ್ನು ಸಚಿವ ಎಸ್.ಎ.ರವೀಂದ್ರನಾಥ್ ಅವರು ಬಿಡುಗಡೆ ಮಾಡಲಿದ್ದಾರೆ.ತಾಂತ್ರಿಕ ಕಾರ್ಯಾಗಾರವನ್ನು ಸಚಿವ ಮುರುಗೇಶ್ ಆರ್. ನಿರಾಣಿ ಮತ್ತು ತೋಟಗಾರಿಕೆಯ ಕುರಿತ ವೆಬ್‌ಸೈಟ್‌ನ್ನು ಸಚಿವ ವಿ.ಸೋಮಣ್ಣ ಅವರು ಉದ್ಘಾಟಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 94480 11001

Post Comments (+)