ತೋಳ ಕಡಿತ: ಮೃತರಿಗೆ ಪರಿಹಾರ ಕೊಡಿ

7

ತೋಳ ಕಡಿತ: ಮೃತರಿಗೆ ಪರಿಹಾರ ಕೊಡಿ

Published:
Updated:

ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ ಇತ್ತೀಚೆಗೆ ತೋಳಗಳು ಕಡಿದು ಮೂವರು ತೀವ್ರವಾಗಿ ಗಾಯಗೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆ ನಡೆದಿದೆ. ಅರಣ್ಯ ಇಲಾಖೆ ಗಾಯಾಳುಗಳ ಚಿಕಿತ್ಸೆಗೆ ಇಪ್ಪತ್ತು ಸಾವಿರ ರೂ. ನೀಡಿದರೂ ಅದು ಚಿಕಿತ್ಸೆಗೆ ಸಾಕಾಗದೆ ಗಾಯಾಳುಗಳು ಮೃತಪಟ್ಟರು.ಮೂವರು ಮೃತರ ಕುಟುಂಬಗಳು ಅನಾಥವಾಗಿವೆ. ಕಾಡು ಪ್ರಾಣಿಗಳ ದಾಳಿಯಲ್ಲಿ ಸತ್ತವರಿಗೆ ಸರ್ಕಾರ ಪರಿಹಾರ ಕೊಡುವ ಯೋಜನೆ ರೂಪಿಸಿದೆ. ಅದರ ಪ್ರಕಾರ ಕಳೆದ ವರ್ಷ ಮೈಸೂರಿನಲ್ಲಿ ಆನೆ ತುಳಿದು ಸತ್ತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷರೂ ಪರಿಹಾರ ನೀಡಿತ್ತು.ಅದೇ ಮಾದರಿಯಲ್ಲಿ ತೋಳಗಳು ಕಡಿದು  ಸತ್ತವರ ಕುಟುಂಬಗಳಿಗೆ ಪರಿಹಾರ ಕೊಡುವ ಉದಾರತೆ ತೋರಬೇಕಿದೆ.ತೋಳಗಳ ಕಡಿತಕ್ಕೆ ತುತ್ತಾದವರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲೂ ಹೆಚ್ಚಿನ ಚಿಕಿತ್ಸೆಯ ಸೌಲಭ್ಯಗಳಿಲ್ಲ. ಗಾಯಗೊಂಡವರ ಚಿಕಿತ್ಸೆಗೆ ವ್ಯವಸ್ಥೆಯನ್ನೂ ಸರ್ಕಾರ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry