ತೋಳ ದಾಳಿಗೆ ಮತ್ತೊಬ್ಬ ಬಲಿ : ಸತ್ತವರ ಸಂಖ್ಯೆ 3ಕ್ಕೆ ಏರಿಕೆ

7

ತೋಳ ದಾಳಿಗೆ ಮತ್ತೊಬ್ಬ ಬಲಿ : ಸತ್ತವರ ಸಂಖ್ಯೆ 3ಕ್ಕೆ ಏರಿಕೆ

Published:
Updated:

ಚಿಂಚೋಳಿ: ತೋಳದ ದಾಳಿಗೆ ತುತ್ತಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ದಸ್ತಾಪುರ ಗ್ರಾಮದ ಗಾಯಾಳು ರಾಮಚಂದ್ರ ಮೊಗಲಪ್ಪ (56) ಬುಧವಾರ ಬೆಳಿಗ್ಗೆ 11.30ಕ್ಕೆ ಮನೆಯಲ್ಲಿ ಸಾವನ್ನಪ್ಪಿದ್ದಾರೆ.ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಕೊಂಡು ಮನೆಗೆ ಮರಳಿದ್ದ ರಾಮಚಂದ್ರ ಸೋಮವಾರ ರಾತ್ರಿಯಿಂದ ಅಸ್ವಸ್ಥರಾಗಿದ್ದರು. ನಂತರ ಮತ್ತೆ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರು ಪ್ರಯೋಜನವಾಗದಿರುವಾಗ ಮನೆಗೆ ಕರೆದೊಯ್ಯಲಾಗಿತ್ತು. ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೃತನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಮಂಜೂರು ಮಾಡಬೇಕೆಂದು ಅಖಿಲ ಭಾರತ ಅಂಬೇಡ್ಕರ್ ಕ್ರಾಂತಿ ದಳ ಒತ್ತಾಯಿಸಿದೆ.ಕಳೆದ ಡಿ.30ರಂದು ಹುಚ್ಚು ತೋಳ ದಾಳಿ ಮಾಡಿ ಜನರ ಮೇಲೆ ಮನ ಬಂದಂತೆ ಎರಗಿ ಮಹಿಳೆಯರು, ಮಕ್ಕಳು ಸೇರಿದಂತೆ 9 ಮಂದಿಯನ್ನು ಕಚ್ಚಿ ಗಾಯಗೊಳಿಸಿತ್ತು. ಗಾಯಾಳುಗಳಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದು, ರಾಮಚಂದ್ರನ ಸಾವಿನಿಂದಾಗಿ ಸತ್ತವರ ಸಂಖ್ಯೆ ಮೂರಕ್ಕೇರಿದಂತಾಗಿದೆ.ಈ ಹಿಂದೆ ಇಂದ್ರಪಾಡ ಹೊಸಳ್ಳಿಯ ಸಂತೋಷ ನಾಗರಾಯ, ಗುಲ್ಬರ್ಗದ ಮುಸ್ತಾಕ್ ಹುಚ್ಚು ತೋಳ ದಾಳಿಯಿಂದ ಸಾವನ್ನಪ್ಪಿದ್ದರು. ಜ.17ರಂದು ರಾಮಚಂದ್ರ ಹಾಗೂ ಇನ್ನಿತರ ಮೂವರಿಗೆ ಆಸ್ಪತ್ರೆ ವೆಚ್ಚಕ್ಕಾಗಿ ಪ್ರಾದೇಶಿಕ ಅರಣ್ಯ ಇಲಾಖೆ ಮಂಜೂರು ಮಾಡಿದ್ದ  ತಾತ್ಕಾಲಿಕ ಪರಿಹಾರದ ಚೆಕ್  ಶಾಸಕ ಸುನೀಲ ವಲ್ಯ್‌ಪುರ ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry