ತೋವಿನಕೆರೆ: ನೀರಿನಲ್ಲಿ ಸವುಳು, ಗಡುಸುತನ

7

ತೋವಿನಕೆರೆ: ನೀರಿನಲ್ಲಿ ಸವುಳು, ಗಡುಸುತನ

Published:
Updated:

ತೋವಿನಕೆರೆ: ಗ್ರಾಮ ಪಂಚಾಯಿತಿ ಈಚೆಗೆ ನಡೆಸಿದ ಕುಡಿಯುವ ನೀರು ಗುಣಮಟ್ಟ ಪರೀಕ್ಷೆಯ ಫಲಿತಾಂಶದ ಅನ್ವಯ ಪಟ್ಟಣದ ಹಲವು ಪ್ರದೇಶಗಳ ನೀರು ಕಳಪೆ ಗುಣಮಟ್ಟದ್ದೆಂದು ತಿಳಿದು ಬಂದಿದೆ. ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ನಿಗದಿಪಡಿಸಿರುವ ಕನಿಷ್ಠ ಮತ್ತು ಗರಿಷ್ಠ ಮಿತಿಗಳಿಗೂ- ನೀರಿನ ಗುಣಮಟ್ಟಕ್ಕೂ ಕೆಲವು ಸ್ಥಳಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ.ಸವುಳು (ಪಿಎಚ್): ಕುಡಿಯುವ ನೀರಿನ ಗಡಸುತನ ಬಿಐಎಸ್ ಪ್ರಕಾರ 6.5ರಿಂದ 8.5ರ ಮಿತಿಯಲ್ಲಿರಬೇಕು. 7ರ ಪರಿಮಿತಿ ಇದ್ದರೆ ಉತ್ತಮ ಗುಣಮಟ್ಟ ಎನಿಸಿಕೊಳ್ಳುತ್ತದೆ. ದಬ್ಬೇಗಟ್ಟ ರಸ್ತೆ, ಅಜ್ಜೇನಹಳ್ಳಿ, ಕಬ್ಬಿಗೆರೆ, ಕುರಿಹಳ್ಳಿ, ಓಬನಹಳ್ಳಿ, ಚಿಕ್ಕಣ್ಣನಹಳ್ಳಿ, ಚಿಕ್ಕರಸನಹಳ್ಳಿ, ದೇವರಹಳ್ಳಿ, ಸಿವಿಡಿಪಾಳ್ಯ, ವೆಂಕಟರಮನಹಳ್ಳಿ ಮತ್ತು ಬೋರಪ್ಪನಹಳ್ಳಿ ಕೊಳವೆ ಬಾವಿಗಳ ನೀರಿನ ಕ್ಷಾರ ಪ್ರಮಾಣ 5.5 ಇರುವುದು ಬೆಳಕಿಗೆ ಬಂದಿದೆ. ಇದೇ ಸ್ಥಳದ ಕೆಲವೆಡೆ ಪಿಎಚ್ ಪ್ರಮಾಣ 5ಕ್ಕೆ ಕುಸಿದಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿರುವುದು ಸವುಳುತನದ ದ್ಯೋತಕವಾಗಿದೆ.ಗಡುಸುತನ (ಟಿಎಚ್): ಕುಡಿಯುವ ನೀರಿನಲ್ಲಿ ಗಡುಸುತನದ ಪ್ರಮಾಣ 300ರಿಂದ 600ರ ಪರಿಮಾಣದಲ್ಲಿರಬೇಕು. ದೇವರಹಳ್ಳಿ (660), ಡಿಎಸ್‌ಜಿ ಪಾಳ್ಯ (825), ಸೂರೇನಹಳ್ಳಿ (720) ಗ್ರಾಮಗಳಲ್ಲಿ ಗಡುಸುತನದ ಪ್ರಮಾಣ ಹೆಚ್ಚಿರುವುದು ಕಂಡು ಬಂದಿದೆ.ಕ್ಲೋರೈಡ್: ಕುಡಿಯುವ ನೀರಿನಲ್ಲಿ ಕ್ಲೋರೈಡ್ ಪ್ರಮಾಣ 250ರಿಂದ 1000ದ ಮಿತಿಯಲ್ಲಿರಬೇಕು. ಬೋರಪ್ಪನಹಳ್ಳಿ (345), ಡಿಎಸ್‌ಜಿ ಪಾಳ್ಯ (325), ಸೂರೇನಹಳ್ಳಿ (280) ಹೊರತುಪಡಿಸಿದರೆ ಉಳಿದೆಲ್ಲ ಸ್ಥಳಗಳಲ್ಲಿ ಇದು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಿದೆ.ಖನಿಜ: ಕುಡಿಯುವ ನೀರಿನಲ್ಲಿ ಪ್ಲೋರೈಡ್ ಪ್ರಮಾಣ 0.5ರಿಂದ 1.5ರಷ್ಟು, ಕಬ್ಬಿಣ 0.3ರಿಂದ 1.0ರಷ್ಟು ಹಾಗೂ ನೈಟ್ರೇಟ್ 45ರಷ್ಟು ಇರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪರೀಕ್ಷೆ ಮಾದರಿ ಸಂಗ್ರಹಿಸಿದ ಎಲ್ಲ 32 ಮೂಲಗಳಲ್ಲಿ ಇದು ಸರಿ ಪ್ರಮಾಣದಲ್ಲಿದೆ.ದುಷ್ಟ ಪರಿಣಾಮ

ಕುಡಿಯುವ ನೀರಿನಲ್ಲಿ ಪಿಎಚ್ ಪ್ರಮಾಣ ಕಡಿಮೆಯಾಗಿರುವುದು ಮತ್ತು ಗಡುಸುತನ ಹೆಚ್ಚಿರುವುದರಿಂದ ದೀರ್ಘಾವಧಿಯಲ್ಲಿ, ನೀರನ್ನು ಸಂಸ್ಕರಿಸದೆ ಕುಡಿಯುವ ಜನರಲ್ಲಿ ಮೂಳೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಎಂಜಿನಿಯರ್ ನರಸಿಂಹಯ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry