ಮಂಗಳವಾರ, ಮೇ 18, 2021
24 °C

ತೌಡು ಕುಟ್ಟುವ ಸಾಹಿತ್ಯ ಸಾಕು: ಜಾಮದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಹೇಳಿದ್ದನ್ನೇ ಹೇಳುತ್ತ ತೌಡು ಕುಟ್ಟುವ ಸಾಹಿತ್ಯ ಸಾಕು. ಮುಂದೆ ನಾವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಬರೆಯಿಸಿ. ಅಮೆರಿಕದ ಪಠ್ಯಕ್ರಮ ಇಟ್ಟುಕೊಂಡು ಅದನ್ನೇ ನಮ್ಮವರ ತಲೆಯಲ್ಲಿ ತುಂಬುವುದನ್ನು ನಿಲ್ಲಿಸಿ' ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ. ಜಾಮದಾರ  ಸಾಹಿತಿಗಳು-ಉಪನ್ಯಾಸಕರಿಗೆ ಸಲಹೆ ನೀಡಿದರು.ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ಸಾಹಿತ್ಯದಲ್ಲಿ ಇನ್ನೂ ಕುವೆಂಪು, ಬೇಂದ್ರೆ ಅವರನ್ನೇ ಎಷ್ಟು ದಿನ ಅನುಸರಿಸುತ್ತೀರಿ? ಸತಿ ಪದ್ಧತಿಯ ಬಗೆಗೆ ಸೊಗಸಾಗಿ ಬರೆದಂತೆ ನಮ್ಮಲ್ಲಿರುವ ದೇವದಾಸಿ ಮತ್ತಿತರ ಅನಿಷ್ಟಗಳ ಕುರಿತು ಬರೆಯಲು ವಿಷಯ ಇಲ್ಲವೇ? ಹಿರಿಯ ಸಾಹಿತಿಗಳ ಬಗ್ಗೆ ನನಗೆ ಗೌರವವಿದೆ. ಆದರೂ, ನಾನು ಸತ್ಯದ ಈ ಮಾತು ಹೇಳುತ್ತಿದ್ದೇನೆ' ಎಂದರು.`ಕರ್ನಾಟಕದಲ್ಲಿ ಇಷ್ಟೊಂದು ವಿಶ್ವವಿದ್ಯಾಲಯಗಳಿದ್ದರೂ, ಸರ್ಕಾರದ ನೀತಿ-ನಿರೂಪಣೆಗಾಗಿ ಸಲಹೆ-ಸೂಚನೆ ನೀಡುವ ತಜ್ಞರು ಕೆಲವೇ ಕೆಲವು ಮಂದಿ ಇದ್ದಾರೆ. ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕರೂ ಅಂತಹ ಪರಿಣತಿ ಪಡೆಯಬೇಕಲ್ಲವೆ?' ಎಂದು ಪ್ರಶ್ನಿಸಿದರು.`ಮಹಿಳಾ ಕಾಲೇಜುಗಳಲ್ಲಿ ಕೇವಲ ಗೃಹ ವಿಜ್ಞಾನ ವಿಷಯ ಕಲಿಸಿದರೆ ಮಹಿಳೆಯರ ಅಭಿವೃದ್ಧಿ ಸಾಧ್ಯವಿಲ್ಲ. ಅವರು ಪುರುಷರಿಗೆ ಸರಿಸಾಟಿಯಾಗಿ ಬೆಳೆಯಬೇಕಾದರೆ ಮಾದರಿ ಪಠ್ಯ ಕ್ರಮ, ಕಲಿಸುವ ರೀತಿ, ಆನ್ವಯಿಕ ಶಿಕ್ಷಣ ಪದ್ಧತಿ ಬಹು ಮುಖ್ಯ' ಎಂದು ಜಾಮದಾರ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.