ತ್ಯಾಗದೆರೆ ಪಾಳ್ಯ: ನೀರಿಗೆ ಬರ

7

ತ್ಯಾಗದೆರೆ ಪಾಳ್ಯ: ನೀರಿಗೆ ಬರ

Published:
Updated:

ಮಾಗಡಿ: ತಾಲ್ಲೂಕಿನ ತ್ಯಾಗದೆರೆ ಪಾಳ್ಯದಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮಸ್ಥರು ದೂರದ ತೋಟಗಳಿಗೆ ಹೋಗಿ ಕೊಳವೆ ಬಾವಿಗಳಿಂದ ನೀರು ತರಬೇಕಿದೆ. ವಿದ್ಯುತ್ ಕಡಿತದ ಕಾರಣ ತೋಟದ ಮಾಲೀಕರು ಕುಡಿಯುವ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತ ತ್ಯಾಗದೆರೆ ಪಾಳ್ಯದ ಜನತೆಗೆ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.ವಿಗ್ರಹ ಪ್ರತಿಷ್ಠಾಪನೆ ಫೆ. 24ಕ್ಕೆ: ತಾಲ್ಲೂಕಿನ ಶ್ರೀಪತಿಹಳ್ಳಿಯ  ದೇವರಹಟ್ಟಿಯಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರದ ದ್ವಾರಪಾಲಕರ ಜಯ-ವಿಜಯರ ವಿಗ್ರಹಗಳ  ಪ್ರತಿಷ್ಠಾಪನೆ ಫೆ.24 ಮತ್ತು25 ರಂದು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry